ಬಿಜೆಪಿಯವರು ಹೇಳಿದಂತೆ ಕುಣಿಯೋಕೆ ಆಗುತ್ತಾ?: ಸಚಿವ ಪ್ರಿಯಾಂಕ್ ಖರ್ಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ತನಿಖೆ ಶುರು ಮಾಡಿದೆ. ಈಗಾಗಲೇ ಎರಡು ದಿನಗಳಿಂದ ಮಹಜರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಪಾರದರ್ಶಕ ತನಿಖೆ ನಡೆಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮೃತ ಸಚಿನ್ ಸಹೋದರಿ ಸಿಬಿಐ ತನಿಖೆಗೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಹೇಳಿಕೆ ನೀಡಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಅಂತಾ ಬಿಜೆಪಿಯವರು ಹೇಳಿದ್ದಾರೆ. ಅದನ್ನೇ ಸಹೋದರಿ ಹೇಳಿದ್ದಾರೆ. ಬಿಜೆಪಿಯವ್ರು ಹೇಳಿದಾಗೆಲ್ಲಾ ಕೇಳಲು ಆಗಲ್ಲ. ಈ ಪ್ರಕರಣವನ್ನು ರಾಜ್ಯದ ಪೊಲೀಸರೇ ಪಾರದರ್ಶಕವಾಗಿ ನಡೆಸಲಿದ್ದಾರೆ, ಸಿಬಿಐ ಕೊಡುವ ಅಗತ್ಯವಿಲ್ಲ ಎಂದರು.

ಗಂಗಾ ಕಲ್ಯಾಣ ಹಗರಣ ನಡೆದಾಗ, ಪಿಎಸ್‌ಐ ಹಗರಣ ನಡೆದಾಗ ಬಿಜೆಪಿಯವ್ರು ಸಿಬಿಐಗೆ ಕೊಟ್ಟಿದ್ರಾ? ಇವ್ರ ಅವಧಿಯಲ್ಲೂ ಹಗರಣಗಳು ನಡೆದವು ಅವರು ಕೊಟ್ಟರಾ? ಮಾನವ ಸಂಪನ್ಮೂಲ ಇಲ್ಲ ಸುಮ್ಮನೆ ಕೊಡಬೇಡಿ ಅಂತಾ ಸಿಬಿಐ ನವ್ರೇ ಹೇಳಿದ್ದಾರೆ. ಇವ್ರು ಹೇಳಿದಂತೆ ಮಾಡೋಕೆ ನಾವು ಅಧಿಕಾರದಲ್ಲಿರೋದಾ? ಅವರ ಸ್ಕ್ರಿಪ್ಟ್‌ಗೆ ತಕ್ಕಂತೆ ನಾವು ಕುಣಿಯೋಕೆ ಆಗುತ್ತಾ? ವಿರೋಧ ಪಕ್ಷದಲ್ಲಿದ್ದವರಿಗೆ ಜವಾಬ್ದಾರಿ ಇರಬೇಕು, ಪ್ರತಿಭಟನೆಗೆ ಬನ್ನಿ ಅಂತಾ ಮೃತ ಸಚಿವ ಕುಟುಂಬಕ್ಕೆ ಫೋರ್ಸ್ ಮಾಡ್ತಿದ್ದಾರೆ. ಪದೇ ಪದೇ ಫೋನ್ ಮಾಡಿ ಸರ್ಕಾರದ ವಿರುದ್ದ ಸ್ಟೇಟ್ ಮೆಂಟ್ ಕೇಳ್ತಿದ್ದಾರೆ. ಇದೇ ರೀತಿ ಹಿಂದೆ ಸಂತೋಷ ಕುಟುಂಬಕ್ಕೆ ಬಿಜೆಪಿಯವರು ಸಹಾಯ ಮಾಡಬೇಕಿತ್ತು? ಅವರ ಮನೆಗೆ ವಿಜಯೇಂದ್ರ ಹೋಗಿದ್ರಾ? ಎಷ್ಟು ಸಲ ಹೋಗಿದ್ರು? ಸಚಿನ್ ವಿಚಾರದಲ್ಲಿ ರಾಜಕೀಯ ಬೆರೆಸದೇ ಅವರ ಕುಟುಂಬಕ್ಕೆ ನ್ಯಾಯ ಕೊಡಿಸೋದು ನಮ್ಮ ಜವಾಬ್ದಾರಿ ಎಂದರು.

ನಾನು ಸಚಿನ್ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದೇನೆ. ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದೇನೆ. ಈ ಬಿಜೆಪಿಯವರಿಗೆ ಸಿಬಿಐ ಮೇಲೆ ಯಾಕಷ್ಟು ಪ್ರೀತಿ? ಒಂದು ಜೀವ ಹೋಗಿದೆ ಅದಕ್ಕೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ. ಸರ್ಕಾರದ ವಿರುದ್ಧ ಕುಟುಂಬಸ್ಥರಿಂದ ಹೇಳಿಕೆ ಕೊಡಿಸೋ ಕೆಲಸ ಬಿಜೆಪಿಯವರು ಮಾಡ್ತಿದ್ದಾರೆ. ಇವ್ರಲ್ಲಿ ಇರೋ ಹುಳುಕು ನಾವು ತಯಾರಿ ಮಾಡಿದ್ದಾ?

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!