Tuesday, June 28, 2022

Latest Posts

ಅಸನಿ ಚಂಡಮಾರುತ: ಕರ್ನಾಟಕಕ್ಕಿರುವುದು ಅಲ್ಲಲ್ಲಿ ತುಂತುರುಮಳೆಯಾಗುವ ಅಂದಾಜು ಮಾತ್ರ

ಮೈನ್ಮಾರ್ ಕರಾವಳಿಗೆ ಅಪ್ಪಳಿಸಿದ ಅಸನಿ ಚಂಡಮಾರುತ ಈಗ ಶಿಥಿಲಗೊಳ್ಳಲು ಆರಂಭವಾಗಿದ್ದು, ಹೆಚ್ಚಿನ ಆತಂಕ ದೂರವಾಗಿದೆ.
ಜೊತೆಗೆ ಸಧ್ಯ ಯಾವುದೇ ವಾಯುಭಾರ ಕುಸಿತದ ಲಕ್ಷಣಗಳಿಲ್ಲ ಎಂಬುದೂ ಸಮಾಧಾನ ತಂದಿದೆ.

ಬುಧವಾರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯಂತೆ ಕೊಡಗು ಜಿಲ್ಲೆ ಹಾಗೂ ಆಗುಂಬೆ ಭಾಗಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.

ಕಾಸರಗೋಡು ಹಾಗೂ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಮೋಡ ಕವಿದ ವಾತಾವರಣ ಅಥವಾ ಅಲ್ಲಲ್ಲಿ ತುಂತುರು ಮಳೆ ಸುರಿಯುವ ಸಾಧ್ಯತೆ ಇದೆ.

ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ದಕ್ಷಿಣ ಕರ್ನಾಟಕದ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss