‌’IPL 2021ರಲ್ಲಿ ಚೆನ್ನೈ ಮೊದಲು ಬ್ಯಾಟ್ ಮಾಡಿ ಗೆದ್ದಿದ್ದು ನಮ್ಮ ಮನಸ್ಸಿನಲ್ಲಿತ್ತು’: ಲಂಕಾ ಕ್ಯಾಪ್ಟನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಗಾಧವಾದ ಆರ್ಥಿಕ ಪ್ರಕ್ಷುಬ್ಧತೆ, ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾ, ಕ್ರಿಕೆಟ್ ಪಿಚ್‌ನಲ್ಲಿ 11 ಹೀರೋಗಳನ್ನು ಕಂಡುಕೊಂಡಿದೆ. ಏಷ್ಯಾಕಪ್​​ ನಲ್ಲಿ ಎಲ್ಲಾವಿಭಾಗಗಳಲ್ಲಿಯೂ ಅದ್ಭುತ ಪ್ರದರ್ಶನ ತೋರಿದ ಸಿಂಹಳೀಯರು 2014ರ ಬಳಿಕ ಮತ್ತೊಮ್ಮೆ ಪ್ರತಿಷ್ಟಿತ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಪಂದ್ಯದಲ್ಲಿ ಟಾಸ್‌ ಸೋತಾಗಲೇ ಶ್ರೀಲಂಕಾ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಟಾಸ್‌ ಪ್ರಮುಖ ಪಾತ್ರವಹಿಸಿತ್ತು. ಯುಎಇ ಕ್ರಿಡಾಂಗಣಗಳಲ್ಲಿ ಮೊದಲು ಬ್ಯಾಟ್‌ ಮಾಡುವುದಕ್ಕಿಂತ ಎರಡನೇ ಇನ್ನಿಂಗ್ಸ್‌ ನಲ್ಲಿ ಚೇಸ್‌ ಮಾಡುವುದು ಸುಲಭ ಅದ್ದರಿಂದಲೇ ಟಾಸ್‌ ಗೆದ್ದು ಚೇಸಿಂಗ್‌ ಆಯ್ದುಕೊಂಡ ತಂಡವೇ ಬಹುತೇಕ ಪಂದ್ಯಗಳಲ್ಲಿ ವಿಜಯಿಯಾಗಿತ್ತು. ಶ್ರೀಲಂಕಾವು 9 ಓವರ್‌ ಗಳಲ್ಲಿ 58 ರನ್‌ ಗಳಿಗೆ 5 ವಿಕೆಟ್‌ಗೆ ಕಳೆದುಕೊಂಡಾಗ ಫ್ಯಾನ್ಸ್‌ ಹತಾಶರಾಗಿದ್ದರು. ಆ ಬಳಿಕ ಸಿಡಿದೆದ್ದ ಸಿಂಹಳೀಯರು ನಿಗದಿತ 20 ಓವರ್‌ ಗಳಲ್ಲಿ 6 ​​ವಿಕೆಟ್‌ಗೆ 170 ರನ್‌ ಗಳ ಬೃಹತ್‌ ಮೊತ್ತವನ್ನು ಕಲೆಹಾಕಿದ್ದರು.
ಗುರಿ ಬೆನ್ನತ್ತಿದ್ದ ಪಾಕ್‌ ಲಂಕನ್ನರ ಶಿಸ್ತಿನ ಬೌಲಿಂಗ್‌ ದಾಳಿಗೆ ಬೆದರಿ 147 ರನ್‌ ಗಳಿಗೆ ಸರ್ವಪತನ ಕಾಣುವ ಮೂಲಕ 23 ರನ ಗಳಿಂದ ಸೋಲೊಪ್ಪಿಕೊಂಡಿತು.
ಪಂದ್ಯದ ಬಳಿಕ ಮಾತನಾಡಿದ ಶ್ರೀಲಂಕಾ ಕ್ಯಾಪ್ಟನ್ ಶನಕ‌, ಮೊದಲು ಬ್ಯಾಟಿಂಗ್ ಮಾಡಿದರೂ ಪಂದ್ಯ ಗೆಲ್ಲುವ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿತ್ತು ಎಂದು ಹೇಳಿದ್ದಾರೆ. ಐಪಿಎಲ್ 2021 ರ ಪೈನಲ್‌ ಪಂದ್ಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌  ಮೊದಲು ಬ್ಯಾಟಿಂಗ್ ಮಾಡಿ ಗೆದ್ದುಕೊಂಡಿದ್ದು ನಮ್ಮ ಮನಸ್ಸಿನಲ್ಲಿತ್ತು. ಆ ಪಂದ್ಯ ಗಮನದಲ್ಲಿ ಇದ್ದುದರಿಂದ ನಾವು ಮೊದಲು ಬ್ಯಾಟ್‌ ಮಾಡಿಯೂ ಗೆಲ್ಲುವ ಬಗ್ಗೆ ಆಶಾದಾಯಕವಾಗಿದ್ದೆವು.  ನಮ್ಮ ಹುಡುಗರಿಗೆ ಇಲ್ಲಿನ ಪರಿಸ್ಥಿತಿಗಳು ಚೆನ್ನಾಗಿ ಗೊತ್ತು. ರಾಜಪಕ್ಷಾ ಹಾಗೂ ವನಿಂದು ಹಸರಂಗ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಕೊನೆಯ ಎಸೆತದ ಸಿಕ್ಸರ್ ಟರ್ನಿಂಗ್ ಪಾಯಿಂಟ್ ಆಗಿತ್ತು’ ಎಂದು ಪಂದ್ಯದ ನಂತರ ಶನಕ ಹೇಳಿದರು.
ಇಪಿಎಲ್ 2021 ಸಹ ಯುಎಇ ನೆಲದಲ್ಲಿ ನಡೆದಿತ್ತು. ಆಗಲೂ ಸಹ ಟಾಸ್‌ ಪ್ರಮುಖ ಪಾತ್ರ ವಹಿಸಿತ್ತು. ನಿರ್ಣಾಯಕ ಪಂದ್ಯಗಳಲ್ಲಿ ಟಾಸ್‌ ಗೆದ್ದು ಚೇಸ್‌ ಮಾಡಿ ಗೆದ್ದಿದ್ದ ಕಲ್ಕತ್ತಾ ನೈಟ್‌ ರೈಡರ್ಸ್‌ ಫೈನಲ್‌ ಪ್ರವೇಶಿಸಿತ್ತು. ಪೈನಲ್‌ ಪಂದ್ಯದಲ್ಲೂ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಕೆಕೆಆರ್‌ ಲೆಕ್ಕಾಚಾರವನ್ನು ಚೆನ್ನೈ‌ ಕೊನೆಯಲ್ಲಿ ಉಲ್ಟಾ ಮಾಡಿತ್ತು. 192 ರನ್ ಸಿಡಿಸಿದ್ದ ಸಿಎಸ್‌ಕೆ ಕೆಕೆಆರ್‌ ತಂಡವನ್ನು 165 ರನ್ ಗಳಿಗೆ ನಿಯಂತ್ರಿಸಿ 27 ರನ್‌ ಗಳ ಗೆಲುವು ಪಡೆಯುವ ಮೂಲಕ  4ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಈ ವಿಚಾರವನ್ನು ಉಲ್ಲೇಖಿಸಿರುವ ಶ್ರೀಲಂಕಾ ನಾಯಕ, ತಮ್ಮ ತಂಡ ಏಷ್ಯಾಕಪ್‌ ನಲ್ಲಿ ತಮ್ಮ ತಂಡವೂ ಮೊದಲು ಬ್ಯಾಟ್‌ ಮಾಡಿ ಗೆಲ್ಲುವಲ್ಲಿ ತಮಗೆ ಈ ಪಂದ್ಯ ಸ್ಫೂರ್ತಿಯಾಗಿತ್ತು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!