Monday, September 26, 2022

Latest Posts

ನಿಮ್ಮ ಬರವಣಿಗೆ ಅಂದವಾಗಿರಬೇಕಾ? ಹಾಗಿದ್ರೆ ಈ ಸರಳ ವಿಧಾನ ಅನುಸರಿಸಿ..

ಎಲ್ಲರಿಗೂ ತಮ್ಮ ಬರವಣಿಗೆ ಸುಂದರವಾಗಿರಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಬರವಣಿಗೆ ಚೆನ್ನಾಗಿದ್ರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸಿಗುತ್ತದೆ ಅನ್ನೋ ನಂಬಿಕೆ ಕೆಲವರಿಗೆ ಇದೆ.ಏನೇ ಆಗಲಿ ಅಕ್ಷರ ದುಂಡಾಗೋಕೆ ಇಲ್ಲಿ ಕೆಲವು ಸರಳ ಮಾರ್ಗಗಳಿವೆ..

  • ಸರಿಯಾದ ಪೆನ್ ಆರಿಸಿ. ಪೆನ್ ಮೇಲೆ ಕೂಡ ಅಕ್ಷರಗಳ ಜೋಡಣೆ ನಿರ್ಧರಿತವಾಗಿರುತ್ತದೆ.
  • ಸರಿಯಾಗಿ ಕುಳಿತುಕೊಂಡಿದ್ದೀರಾ ಗಮನಿಸಿ, ಬೆನ್ನು ನೇರವಾಗಿರಲಿ.ನೆಲದ ಮೇಲೆ ಕಾಲಿರಲಿ, ಕೈ ನೇರವಾಗಿರಲಿ.
  • ಪೆನ್‌ನಷ್ಟೇ ಪೇಪರ್ ಕೂಡ ಮುಖ್ಯ. ಸರಿಯಾದ ಕಾಗಗದ ಮೇಲೆ ಬರವಣಿಗೆ ಆರಂಭಿಸಿ.
  • ನಿಧಾನವಾಗಿ ಆರಂಭಿಸಿ. ಒಂದೇ ಬಾರಿಗೆ ನಿಮ್ಮ ಅಕ್ಷರಗಳು ಸುಂದರವಾಗಿ ಕಾಣಲು ಸಾಧ್ಯವಿಲ್ಲ. ನಿಧಾನಿಸಿ.
  • ನಾಲ್ಕು ಸಾಲು ಬರೆದು ಒಮ್ಮೆ ಗಮನಿಸಿ. ಏನಾದರೂ ಬದಲಾವಣೆ ಬೇಕೆಂದರೆ ಮಾಡಿ.
  • ನಿಮಗೆ ಯಾರದ್ದಾದರೂ ಅಥವಾ ಯಾವುದಾದರೂ ಹ್ಯಾಂಡ್‌ರೈಟಿಂಗ್ ಇಷ್ಟ ಆಗಿದ್ದರೆ ಅದನ್ನೇ ಕಾಪಿ ಮಾಡಿ. ಅದೇ ರೀತಿ ಆಗದಿದ್ದರೂ ನಿಮ್ಮದೇ ಹೊಸ ಸ್ಟೈಲ್ ಆಗುತ್ತದೆ.
  • ಗೆರೆಯ ಮಧ್ಯೆ ಬರೆಯುವ ಪ್ರಯತ್ನ ಮಾಡಿ. ಇದರಿಂದ ಅಕ್ಷರಗಳು ದೊಡ್ಡದಾಗಿ, ದುಂಡಾಗಿ ಕಾಣುತ್ತವೆ.
  • ಬೇರೆ ಕಾಪಿಗಳಲ್ಲಿ ಯಾವ ಅಕ್ಷರ ಇಳಿಸಿದ್ದಾರೆ, ಏರಿಸಿದ್ದಾರೆ ಸೂಕ್ಷ್ಮವಾಗಿ ಗಮನಿಸಿ ಆರಂಭಿಸಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!