ಏಷ್ಯಾಕಪ್‌ ಫೈನಲ್‌ಗೆ ಭಾರತದ ಪ್ರವೇಶವನ್ನು ತಪ್ಪಿಸಿದ್ದು ಕೇವಲ 2 ಎಸೆತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕಳೆದ 2 ವಾರಗಳಿಂದ ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆ ಒದಗಿಸಿದ ಏಷ್ಯಾಕಪ್‌ ಟೂರ್ನಿ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಸೂಪರ್‌ 4 ಹಂತದ ಪಾಯಿಂಟ್ಸ್‌ ಟೇಬಲ್‌ ನಲ್ಲಿ ಮೊದಲ ಎರಡು ಸ್ಥಾನ ಗಳಿಸಿದ ಶ್ರೀಲಂಕಾ ಹಾಗೂ ಪಾಕ್‌ ತಂಡಗಳು ಪೈನಲ್‌ ನಲ್ಲಿ ಆಡಲಿವೆ. ಟೂರ್ನಿಯ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಅಫ್ಘಾನಿಸ್ತಾನ ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೆ ತೃಪಿಪಟ್ಟಿವೆ.
ನಿನ್ನೆ ನಡೆಸ ಲಂಕಾ- ಪಾಕ್‌ ನಡುವಿನ ಸೂಪರ್‌ 4 ಹಂತದ ಕೊನೆಯ ಪಂದ್ಯದ ಬಳಿಕ ಬಿಡುಗಡೆಯಾದ ಪಾಯಿಂಟ್ಸ್‌ ಟೇಬಲ್‌ ನೋಡಿ ಟೀಂ ಇಂಡಿಯಾ ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದಾರೆ. ಏಕೆಂದರೆ 2 ಎಸೆತಗಳು ತನ್ನ ಪರವಾಗಿದ್ದಿದ್ದರೆ ಟೀಂ ಇಂಡಿಯಾ ಯಾವುದೇ ಸಮಸ್ಯೆ ಇಲ್ಲದೆ ಫೈನಲ್‌ ಪ್ರವೇಶಿಸಿರುತ್ತಿತ್ತು!.
ಈ ಹಂತದಲ್ಲಿ 3 ಪಂದ್ಯಗಳನ್ನಾಡಿರುವ ಪಾಕಿಸ್ತಾನ 2 ಜಯದೊಂದಿಗೆ -0.279 ನೆಟ್​ ರನ್​ ಪಡೆದುಕೊಂಡಿದೆ. ಅಷ್ಟೇ ಪಂದ್ಯಗಳನ್ನಾಡಿವ ಟೀಮ್ ಇಂಡಿಯಾ 1 ಗೆಲುವಿನೊಂದಿಗೆ +1.607 ನೆಟ್ ರನ್ ರೇಟ್ ಹೊಂದಿದೆ.  ಪಾಕ್‌ ಹಾಗೂ ಭಾರತದ ರನ್‌ ರೇಟ್‌ ನಡುವೆ ಭಾರೀ ವ್ಯತ್ಯಾಸವಿದೆ. ಅಘ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ಪಾಕ್‌ ಕೊನೆಯ ಓವರ್‌ ನಲ್ಲಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಗೆಲುವು ಸಾಧಿಸದೆ ಹೋಗಿದ್ದಲ್ಲಿ ಭಾರತ ಸುಲಭವಾಗಿ ಪೈನಲ್‌ ಪ್ರವೇಶಿಸಿರುತ್ತಿತ್ತು ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣ.
ಅಫ್ಘಾನ್‌ ವಿರುದ್ಧದ ಪಂದ್ಯದಲ್ಲಿ ಪಾಕ್‌ ಗೆ ಕೊನೆಯ ಓವರ್​ನಲ್ಲಿ 11 ರನ್​ಗಳ ಅವಶ್ಯಕತೆಯಿತ್ತು. ಪಾಕ್‌ ಕೈಯ್ಯಲ್ಲಿದ್ದುದು ಕೇವಲ 1 ವಿಕೆಟ್‌. ಒತ್ತಡಕ್ಕೆ ಒಳಗಾಗಿದ್ದ ಅಫ್ಗಾನ್‌ ಬೌಲರ್‌ ಫಾರೂಕಿ ಎಸೆದಿದ್ದ ಎರಡು ಫುಟ್‌ ಟಾಸ್‌ ಎಸೆತಗಳನ್ನು ಸಿಕ್ಸರ್‌ ಗೆ ಅಟ್ಟಿದ್ದ ಪಾಕ್‌ ‌ನ 9 ನೇ ಕ್ರಮಾಂಕದ ಬ್ಯಾಟ್ಸ್‌ ಮನ್‌ ನಸೀಮ್‌ ಶಾ ಪಾಕ್‌ ಪರ ಹೀರೋ ಆಗಿದ್ದರು.
ಆ ಎರಡು ಎಸೆತಗಳು ಭಾರತದ ಭವಿಷ್ಯವನ್ನೂ ನಿರ್ಧರಿಸಿದವು. ಪರಿಣಾಮವಾಗಿ ರೋಹಿತ್ ಶರ್ಮಾ ನೇತೃತ್ವದ ತಂಡವು ತನ್ನ ಏಷ್ಯಾಕಪ್ ಕಿರೀಟವನ್ನು ಉಳಿಸಿಕೊಳ್ಳಲು ವಿಫಲವಾಯಿತು.
ದುಬೈನಲ್ಲಿ ನಡೆದ ತನ್ನ ಅಂತಿಮ ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 101 ರನ್‌ಗಳ ಬೃಹತ್ ಜಯದೊಂದಿಗೆ ಟೀಮ್ ಇಂಡಿಯಾ ಏಷ್ಯಾ ಕಪ್ 2022 ರಲ್ಲಿ ತನ್ನ ಅಭಿಯಾನವನ್ನು ಪೂರ್ಣಗೊಳಿಸಿದೆ.
ಸೆಪ್ಟೆಂಬರ್ 11 ರಂದು ದುಬೈ ಇಂಟರ್​ನ್ಯಾಷನಲ್ ಮೈದಾನದಲ್ಲಿ  ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!