ಏಷ್ಯಾಕಪ್: ಬಾಂಗ್ಲಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಶ್ರೀಲಂಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಷ್ಯಾಕಪ್​ನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (Sri Lanka) ತಂಡವು ಜಯ ಸಾಧಿಸಿದೆ.

ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ (Bangladeshಮೊದಲು ಬ್ಯಾಟಿಂಗ್ ಮಾಡಿತು. 42.4 ಓವರ್​ಗಳಲ್ಲಿ 164 ರನ್​ಗಳಿಗೆ ಆಲೌಟ್ ಆಯಿತು.

165 ರನ್​ಗಳ ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯುವ ವೇಗಿ ತಸ್ಕಿನ್ ಅಹ್ಮದ್ ಯಶಸ್ವಿಯಾಗಿದ್ದರು. ಮೂರನೇ ಓವರ್​ನ ಮೊದಲ ಎಸೆತದಲ್ಲಿ ದಿಮುತ್ ಕರುಣರತ್ನೆ (1) ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು.
ಇದರ ಬೆನ್ನಲ್ಲೇ ಎಡಗೈ ವೇಗಿ ಶೊರಿಫುಲ್ ಇಸ್ಲಾಂ ಪಾತುಮ್ ನಿಸ್ಸಂಕಾ (14) ವಿಕೆಟ್ ಕಬಳಿಸಿದರು. ಆ ಬಳಿಕ ಬಂದ ಕುಸಾಲ್ ಮೆಂಡಿಸ್ (5) ಶಕೀಬ್ ಅಲ್ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಅಂತಿಮವಾಗಿ 92 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 62 ರನ್ ಬಾರಿಸುವ ಮೂಲಕ ಚರಿತ್ ಅಸಲಂಕಾ 39 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಶ್ರೀಲಂಕಾ ತಂಡವು 5 ವಿಕೆಟ್​ಗಳ ಜಯ ಸಾಧಿಸಿ ಶುಭಾರಂಭ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!