ಹಮಾಸ್ ದಾಳಿಗೆ 40 ಜನರ ಸಾವು: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಇಸ್ರೇಲ್ ಕಡೆಗೆ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಭಯೋತ್ಪಾದಕರು ಶನಿವಾರ ಮುಂಜಾನೆ 5000 ರಾಕೆಟ್‌ಗಳನ್ನು ಹಾರಿಸಿ ಯುದ್ಧದ ಪರಿಸ್ಥಿತಿ ಸೃಷ್ಟಿಸಿದ್ದು, ಇಸ್ರೇಲ್​ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ರಾಕೆಟ್ ದಾಳಿಯ ನಂತರ 40 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ವಾಯುದಾಳಿ ಮಾಡಿ 161 ಪ್ಯಾಲೆಸ್ತೀನಿಯನ್ನರನ್ನು ಕೊಂದಿದ್ದು, ಉಭಯ ದೇಶಗಳು ನಡೆಸಿರುವ ದಾಳಿಯಲ್ಲಿ 1000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ನಾವು ಯುದ್ಧದಲ್ಲಿ ತೊಡಗಿದ್ದು ಇದರಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ನಮ್ಮ ಶತ್ರುಗಳು ಎಂದಿಗೂ ಸಾಧ್ಯವಾಗದ ಬೆಲೆ ತೆರುತ್ತಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಡಿಯೋ ಹೇಳಿಕೆ ಒಂದನ್ನು ಪ್ರಕಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!