Thursday, June 1, 2023

Latest Posts

ಗಿನ್ನಿಸ್ ದಾಖಲೆ ಬರೆದ ಅಸ್ಸಾಂನ ಸಾಂಪ್ರದಾಯಿಕ ನೃತ್ಯ `ಬಿಹು’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಸ್ಸಾಂ ರಾಜ್ಯ ಜಾನಪದ ನೃತ್ಯ (ಸಾಂಪ್ರದಾಯಿಕ ನೃತ್ಯ) ʻಬಿಹುʼ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆದ್ದಿದೆ. ಅಸ್ಸಾಂನಲ್ಲಿ ಒಂದೇ ವೇದಿಕೆಯಲ್ಲಿ 11,304 ಕಲಾವಿದರು ಸಾಂಪ್ರದಾಯಿಕ ಅಸ್ಸಾಮಿ ನೃತ್ಯವನ್ನು ಪ್ರದರ್ಶಿಸಿದರು. ಒಂದೇ ವೇದಿಕೆಯಲ್ಲಿ ಬಿಹುವಿನ ಲಯಬದ್ಧ ನೃತ್ಯ ಗಿನ್ನೆಸ್ ದಾಖಲೆಯನ್ನು ಗೆದ್ದಿದೆ. 11,304 ಕಲಾವಿದರು ಹಾಗೂ ನರ್ತಕರು ಒಂದೇ ವೇದಿಕೆಯಲ್ಲಿ ಬಿಹು ನೃತ್ಯ ಪ್ರದರ್ಶಿಸಿ ಇತಿಹಾಸ ಸೃಷ್ಟಿಸಿದರು.

ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ವಾದ್ಯಗಳಾದ ಧೋಲ್, ತಾಲ್, ಗೊಗೋನಾ, ಟೋಕಾ, ಪೇಪಾ ನುಡಿಸುವ ಸಂಗೀತ ಕಲಾವಿದರು ಭಾಗವಹಿಸಿದ್ದರು. ಅಸ್ಸಾಂನ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದಾದ್ಯಂತ ಗುರುತಿಸುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮಾಸ್ಟರ್ ಟ್ರೇನರ್ ಗಳು, ಡ್ಯಾನ್ಸರ್ ಗಳು ಸೇರಿದಂತೆ ಭಾಗವಹಿಸಿದ ಎಲ್ಲರಿಗೂ ಸರ್ಕಾರ ರೂ.25 ಸಾವಿರ ಅನುದಾನ ನೀಡಲಿದೆ.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಒಂದೇ ವೇದಿಕೆಯಲ್ಲಿ ಅತಿದೊಡ್ಡ ಬಿಹು ನೃತ್ಯ ಪ್ರದರ್ಶನವನ್ನು ಆಯೋಜಿಸುವ ಮತ್ತು ಜಾನಪದ-ನೃತ್ಯ ವಿಭಾಗದಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ವೇದಿಕೆಯಲ್ಲಿ ಡೋಲು ವಾದಕರು ಮತ್ತೊಂದು ದಾಖಲೆ ನಿರ್ಮಿಸಿದರು. ಅದೇ ಬಿಹು ನೃತ್ಯ ಕಾರ್ಯಕ್ರಮದ ನಂತರ ಕ್ರೀಡಾಂಗಣದಲ್ಲಿ 2548 ಮಂದಿ ಡ್ರಮ್ ಬಾರಿಸಿದ್ದು, ಇಷ್ಟೊಂದು ಸಂಖ್ಯೆಯಲ್ಲಿ ಡ್ರಮ್ ವಾದಕರು ಒಂದೇ ಕಡೆ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಪಡೆದರು. ಒಂದೇ ವೇದಿಕೆಯಲ್ಲಿ ಮತ್ತು ಅದೂ ಒಂದೇ ದಿನದಲ್ಲಿ ನಡೆದ ಎರಡು ಕಾರ್ಯಕ್ರಮಗಳನ್ನು ಗಿನ್ನೆಸ್ ದಾಖಲೆ ಎಂದು ಪರಿಗಣಿಸಬಹುದು.

ಈ ನೃತ್ಯವನ್ನು ಪ್ರದರ್ಶಿಸಲು ನೃತ್ಯಗಾರರು ಸಾಂಪ್ರದಾಯಿಕ ಅಸ್ಸಾಮಿ ರೇಷ್ಮೆ ಮತ್ತು ಮುಗಾ ರೇಷ್ಮೆ ಉಡುಪುಗಳನ್ನು ಧರಿಸುತ್ತಾರೆ. ಬಿಹು ನೃತ್ಯವನ್ನು ಬಿಹು ಹಾಡುಗಳ ಟ್ಯೂನ್‌ಗೆ ಅನುಗುಣವಾಗಿ ನಡೆಸಲಾಗುತ್ತದೆ. ಬಿಹು ಹಾಡುಗಳು ಅಸ್ಸಾಮಿ ಹೊಸ ವರ್ಷವನ್ನು ಪ್ರಾರಂಭಿಸುವುದರಿಂದ ಹಿಡಿದು ರೈತರ ಜೀವನಶೈಲಿಯನ್ನು ಚಿತ್ರಿಸುವವರೆಗೆ ವಿವಿಧ ವಿಷಯಗಳನ್ನು ಒಳಗೊಂಡಿದೆ.

ಈ ನೃತ್ಯವನ್ನು ಬೋಹಾಗ್ ಬಿಹು (ವಸಂತ ಬಿಹು) ಸಮಯದಲ್ಲಿ ಹುಸೋರಿ (ನರ್ತಕರ ಗುಂಪು) ಪ್ರತಿ ಮನೆಗೆ ಹೋಗಿ ನೃತ್ಯವನ್ನು ಪ್ರದರ್ಶಿಸಿ ನಂತರ ಮನೆಯವರನ್ನು ಆಶೀರ್ವದಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!