ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರತ ಮೂಳೆ ತಜ್ಞರೊಬ್ಬರಿಗೆ ಚಪ್ಪಲಿಯಿಂದ ಹೊಡೆದು ಕೊರಳು ಪಟ್ಟಿ ಹಿಡಿದು ಜಗ್ಗಾಡಿದ ಘಟನೆ ನಡೆದಿದೆ.
ನಗರದ ಸರ್ಕಾರಿ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ರೋಗಿಯ ಸಹೋದರಿಗೆ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂಳೆ ತಜ್ಞ, ಹಿರಿಯ ವೈದ್ಯ ವೆಂಕಟೇಶ್ ಮೇಲೆ ಮಹಿಳೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಇತ್ತ ವೈದ್ಯರ ಮೇಲೆನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ ಸಿಬ್ಬಂದಿಗಳು ಹಲ್ಲೆಗೈದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದೀಗ ಇಬ್ಬರನ್ನು ಬಂಧಿಸಲಾಗಿದೆ. ಹಲ್ಲೆ ಮಾಡಿದ್ದ ಇರ್ಫಾನ್, ತಸೀಮಾ ಬಂಧಿತರು. ಬಂಧಿತರು ಚಿಕ್ಕಮಗಳೂರು ನಗರದ ಟಿಪ್ಪು ಬಡಾವಣೆ ನಿವಾಸಿಗಳಾಗಿದ್ದಾರೆ.