ಕಾಂಗೊದ ವಲಸೆ ಜನರ ಶಿಬಿರದ ಮೇಲೆ ದಾಳಿ: ಕನಿಷ್ಠ 60 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೂರ್ವ ಪ್ರಜಾಸತ್ತಾತ್ಮಕ ಗಣರಾಜ್ಯ ಕಾಂಗೊದ ವಲಸೆ ವ್ಯಕ್ತಿಗಳ ಶಿಬಿರದ ಮೇಲೆ ಸೇನಾಪಡೆ ದಾಳಿ ನಡೆಸಿದ್ದು, ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ.
ಇಟುರಿ ಪ್ರದೇಶದ ಸಾವೋ ಶಿಬಿರದ ಮೇಲೆ ದಾಳಿ ನಡೆದಿದ್ದು,ಕೊಡೆಕೊ ಸೇನಾ ಪಡೆ ದಾಳಿಗೆ ಹೊಣೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೊಡೆಕೊ ಸೇನಾ ಪಡೆ ಇತ್ತೀಚೆಗಷ್ಟೇ ಇಟುರಿ ಪ್ರಾಂತ್ಯದ ನೂರಾರು ನಾಗರಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಂದಿತ್ತು. ಮನೆ ತೊಡೆಯುವಂತೆ ಜನರನ್ನು ಒತ್ತಾಯಿಸಿತ್ತು. ಈ ಕಾರಣಗಳಿಂದ ಕೊಡೆಕೊ ಸೇನಾ ಪಡೆ ದಾಳಿ ಇದಾಗಿರಬಹುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!