ಪಶ್ಚಿಮದಲ್ಲಿ ಹಿಂದು ದೇವಾಲಯಗಳ ಮೇಲಾಗ್ತಿದೆ ದಾಳಿ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿಗಳಾಗುತ್ತಿರುವ ಕುರಿತು ವರದಿಯಾಗಿದೆ. ಅಮೇರಿಕದ ವಿವಿಧೆಡೆ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿ ದಾಳಿಗಳಾಗುತ್ತಿರುವುದರ ಕುರಿತು  ಅಮೇರಿಕನ್‌ ಹಿಂದೂ ಫೌಂಡೇಶನ್‌ ಕಳವಳ ವ್ಯಕ್ತಪಡಿಸಿದೆ.

ಅಮೆರಿಕಾದ ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಪೆನ್ಸಿಲ್ವೇನಿಯಾದಲ್ಲಿ ದೇವಾಲಯದ ಸಾಧುಗಳನ್ನು ಬೆದರಿಸಿ ದರೋಡೆಗಳಾಗುತ್ತಿರುವ ಕುರಿತು ಅಮೇರಿಕನ್‌ ಹಿಂದೂ ಫೌಂಡೇಶನ್‌ ಆತಂಕ ವ್ಯಕ್ತಪಡಿಸಿದೆ. ವರದಿಯೊಂದರ ಪ್ರಕಾರ ಎಲ್ಲಾ ದೇವಾಲಯಗಳಲ್ಲಿ ಹಾಡಹಗಲೇ ದರೋಡೆಯಾಗುತ್ತಿದೆ. ಅಮೆರಿಕದ ಈ ದೇವಾಲಯಗಳಲ್ಲಿ ನಡೆದ ದರೋಡೆಗಳೆಲ್ಲವೂ ಒಂದೇ ತೆರನಾಗಿವೆ. ಭಕ್ತರ ಅಥವಾ ಸಂದರ್ಶಕರ ರೂಪದಲ್ಲಿ ಮಹಿಳೆಯರು ದೇವಸ್ಥಾನಗಳನ್ನು ಪ್ರವೇಶಿಸುತ್ತಿದ್ದು ಚಾಕುಗಳನ್ನು ತೋರಿಸಿ ದೇವಸ್ಥಾನದ ಅರ್ಚಕರನ್ನುಬೆದರಿಸುತ್ತಿದ್ದಾರೆ. ಈ ರೀತಿ ಮಹಿಳೆಯರು ಅರ್ಚಕರುಗಳಿಗೆ ಬೆದರಿಸಿ ಘೇರಾವ್‌ ಹಾಕಿ ಮಂದಿರದ ಗರ್ಭಗುಡಿಗಳನ್ನು ಪ್ರವೇಶಿಸುತ್ತಿದ್ದಾರೆ.

ಈ ರೀತಿಯ ಘಟನೆಗಳು ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಅನೇಕ ಕಡೆಗಳಲ್ಲಿ ವರದಿಯಾಗಿವೆ. ಹಿಂದೂ ಅಮೇರಿಕನ್ ಫೌಂಡೇಶನ್ ತನ್ನ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಟ್ವೀಟ್‌ವೊಂದರಲ್ಲಿ ಹಿಜಾಬ್‌ ಧರಿಸಿದ ಇಬ್ಬರು ಮಹಿಳೆಯರು ಮುಖವಾಡ ಧರಿಸಿ ದೇಗುಲಗಳನ್ನು ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಹಿನ್ನೆಲೆಯಲ್ಲಿ ಹಿಂದೂ ದೇವಾಲಯಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಹೋಮ್‌ ಲ್ಯಾಂಡ್‌ ಸೆಕ್ಯಿರಿಟಿಗೆ ಒತ್ತಾಯಿಸಲಾಗುತ್ತಿದೆ. “ದೇವಾಲಯಗಳು ಭದ್ರತಾ ಪ್ರೋಟೋಕಾಲ್‌ಗಳನ್ನು ಸಿದ್ಧಪಡಿಸಬೇಕು ಮತ್ತು ಸಿಬ್ಬಂದಿ/ಸ್ವಯಂಸೇವಕರು ಅಪರಿಚಿತ ಸಂದರ್ಶಕರನ್ನು ಸಂಪರ್ಕಿಸಲು ಮತ್ತು ಪರಿಚಯವನ್ನು ಕೇಳಲು ಅಧಿಕಾರ ಹೊಂದಿರಬೇಕು” ಎಂದು ಅಮೇರಿಕನ್‌ ಹಿಂದೂ ಫೌಂಡೇಶನ್‌ ಹೇಳಿದೆ. ಹಿಂದೂಫೋಬಿಯಾ ಹೆಚ್ಚಾಗುತ್ತಿರುವ ಕುರಿತು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!