Wednesday, February 8, 2023

Latest Posts

ಕಾನೂನು ಬಾಹಿರ ಚಟುವಟಿಕೆ ಅಡ್ಡದ ಮೇಲೆ ದಾಳಿ: ಬೆಂಗಳೂರು ಮೂಲದ ರೌಡಿಶೀಟರ್‌ ಗಳ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಆಂಧ್ರ ಪ್ರದೇಶದ ಅನಂತಪುರ ಪೊಲೀಸರು ಭರ್ಜರಿ ಕಾರ್ಯಾಚರಣೆಯಿಂದ ನಕಲಿ ನೋಟು ಚಲಾವಣೆ ಹಾಗೂ ಇತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಕುಖ್ಯಾತ ಅಂತಾರಾಜ್ಯ ಸುಲಿಗೆಕೋರರ ತಂಡ ಬಲೆಗೆ ಬಿದ್ದಿದೆ.

ಬಂಧಿತರಿಂದ 18 ಶಸ್ತ್ರಾಸ್ತ್ರಗಳ ಜೊತೆಗೆ 95 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಉಮ್ಮರ್ತಿಯ ರಾಜ್‌ಪಾಲ್ ಸಿಂಗ್ ಹಾಗೂ ಸುತಾರ್ ಸೇರಿದಂತೆ ಬೆಂಗಳೂರು ಮೂಲದ ನಾಲ್ವರು ರೌಡಿಶೀಟರ್​ಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಆಂಧ್ರಪ್ರದೇಶ, ಕರ್ನಾಟಕ, ಗೋವಾದಲ್ಲಿ ಶಸ್ತ್ರಾಸ್ತ್ರ ಮಾರಾಟ, ನಕಲಿ ಕರೆನ್ಸಿ, ಡ್ರಗ್ಸ್​ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿತ್ತು.

ಬೆಂಗಳೂರಿನ ಜಮ್ಶೀದ್ ಅಲಿಯಾಸ್ ಖಾನ್ ಗಾಂಜಾ, ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ 12 ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಬೆಂಗಳೂರಿನ ಅಮೀರ್ ಪಾಷಾ ಏಳು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ದಕ್ಷಿಣ ಗೋವಾದ ರಿಯಾಜ್ ಅಬ್ದುಲ್ ಶೇಕ್ ನಾಲ್ಕು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಮಧ್ಯಪ್ರದೇಶದ ಶಸ್ತ್ರಾಸ್ತ್ರ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದಾಗ, ನಮ್ಮ ತಂಡವು ಬೆರೆಟ್ಟಾ 9ಎಂಎಂ ಸೆಮಿ ಅಟೋಮೆಟಿಕ್ ಮಿಸ್ತೂಲ್, 9 ಎಂಎಂ ಪಿಸ್ತೂಲ್, 11 0.32 ಎಂಎಂ ಪಿಸ್ತೂಲ್, ರಿವಾಲ್ವರ್​ಗಳನ್ನು ವಶಪಡಿಸಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!