ಟಿ20 ಕ್ರಿಕೆಟ್​ನಿಂದ ತಾತ್ಕಾಲಿಕ ಬ್ರೇಕ್ ಪಡೆದ ವಿರಾಟ್​ ಕೊಹ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಸತತ ಪಂದ್ಯ ಆಡುತ್ತಿರುವ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ ಸದ್ಯ ಟಿ20 ಕ್ರಿಕೆಟ್​ನಿಂದ ತಾತ್ಕಾಲಿಕ ಬ್ರೇಕ್ ಪಡೆದಿದ್ದಾರೆ . ಈ ಮೂಲಕ ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕೊಹ್ಲಿ ಅಲಭ್ಯರಾಗುತ್ತಿರುವುದು ಬಹುತೇಕ ಖಚಿತ ಎನ್ನುವಂತಿದೆ.

ಟಿ20 ವಿಶ್ವ ಕಪ್​ ಸೋಲಿನ ಬಳಿಕ ಭಾರತ ಕ್ರಿಕೆಟ್​ ತಂಡಹಿರಿಯ ಆಟಗಾರರನ್ನು ಚುಟುಕು ಮಾದರಿಯ ಕ್ರಿಕೆಟ್​ನಿಂದ ಕೈ ಬಿಟ್ಟು ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕುವ ಚಿಂತನೆಯೂ ನಡೆಸಿದೆ. ಈ ಮಧ್ಯೆ ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​ನಿಂದ ತಾತ್ಕಾಲಿಕ ಬ್ರೇಕ್​ ಪಡೆಯಲು ನಿರ್ಧರಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದಂತಿದೆ.

ಒಂದೊಮ್ಮೆ ಕೊಹ್ಲಿ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದು ಅವರು ಟಿ20 ಕ್ರಿಕೆಟ್​ನಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!