ಮೋದಿ ಪರ ಹಾಡು ಬರೆದ ಯುವಕನ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳ ರಚನೆ

ಹೊಸದಿಗಂತ ವರದಿ,ಮೈಸೂರು:

ಪ್ರಧಾನಿ ನರೇಂದ್ರ ಮೋದಿ ಪರ ಹಾಡು ಬರೆದಿರುವ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಆರೋಪಿಗಳನ್ನು ಬಂಧಿಸಲು ನಗರ ಪೊಲೀಸ್ ಆಯುಕ್ತರ ೬ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.

ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ಹಳ್ಳಿಕೆರೆ ಹುಂಡಿ ಗ್ರಾಮದ ಲಕ್ಷ್ಮಿ ನಾರಾಯಣ ಎಂಬುವವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೋಸ್ಕರ ಜೈ ಹೋ ಮೋದಿ ಎಂಬ ಶೀರ್ಷಿಕೆ ಇರುವ ಹಾಡನ್ನು ರಚನೆ ಮಾಡಿ, ತಮ್ಮ ಆರ್.ಆರ್. ಫಿಲಂ ಯೂ ಟ್ಯೂಬ್ ಚಾನಲ್ ಗೆ ಅಪ್‌ಲೋಡ್ ಮಾಡಿದ್ದು, ಏ. ೧೯ ರಂದು ಮೈಸೂರಿನ ಗರ‍್ನಮೆಂಟ್ ಗೆಸ್ಟ್ಹೌಸ್ ಪಾರ್ಕ್ ಬಳಿ ಇರುವ ಒಂದು ಬಿಲ್ಡಿಂಗ್ ಬಳಿ ಬಂದoತಹ ಒಬ್ಬ ಹುಡುಗನಿಗೆ,ಲಕ್ಷ್ಮಿ ನಾರಾಯಣ ಕರೆದು, ನರೇಂದ್ರ ಮೋದಿಯವರ ಬಗ್ಗೆ ಮಾಡಿರುವ ಹಾಡನ್ನು ನೋಡಿ, ಯೂಟ್ಯೂಬ್ ಚಾನಲ್ ಸಬ್‌ ಸ್ಕ್ರಬ್ ಮಾಡಿ, ಶೇರ್ ಮಾಡುವಂತೆ ಕೋರಿಕೊದ್ದರು.

ಆ ಹುಡುಗ ಒಪ್ಪಿಕೊಂಡು ತನ್ನ ಸ್ನೇಹಿತರಿಗೂ ತೋರಿಸಿ ಸಬ್‌ ಸ್ಕ್ರಬ್ ಮಾಡಿಸಿ ಶೇರ್ ಮಾಡಿಸುತ್ತೇನೆ ಎಂದು ಹೇಳಿ ಸ್ವಲ್ಪ ದೂರ ಕರೆದುಕೊಂಡು ಹೋಗಿದ್ದು, ಅಲ್ಲಿದ್ದ ೦೪ ಜನ ಹುಡುಗರು ಸೇರಿದಂತೆ ಐದು ಜನರು ಸೇರಿ, ಲಕ್ಷ್ಮಿ ನಾರಾಯಣ ರವರಿಗೆ ಬಾಯಿ ಮುಚ್ಚಿ, ಕೈಗಳಿಂದ ಹೊಡೆದು, ಬಿಯರ್ ಬಾಟಲಿಯಿಂದ ಕೈಗಳನ್ನು ಕುಯ್ದು, ಸಿಗರೇಟ್‌ನಿಂದ ಸುಟ್ಟಿದ್ದು, ಲಕ್ಷ್ಮಿ ನಾರಾಯಣ ಇವರಿಂದ ತಪ್ಪಿಸಿಕೊಂಡು ಬಂದು ನಜûರ್‌ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಸಂಬoಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣದ ಆರೋಪಿಗಳ ಪತ್ತೆ ಸಂಬoಧ ಮೈಸೂರು ನಗರದ ಪೊಲೀಸ್ ಆಯುಕ್ತ ರಮೇಶ್‌ರವರ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಮುತ್ತುರಾಜ್, ಅಪರಾಧ ಮತ್ತು ಸಂಚಾರ ಡಿ.ಸಿ.ಪಿ, ಎಸ್. ಜಾಹ್ನವಿ ರವರ ನೇತೃತ್ವದಲ್ಲಿ ನಗರದ ಎ.ಸಿ.ಪಿ.ರವರುಗಳು ಹಾಗೂ ಪೊಲೀಸ್ ಇನ್ಸ್ಪೆಕ್ಟರ್‌ರವರುಗಳು ಮತ್ತು ಸಿಬ್ಬಂದಿಗಳನ್ನೊಳಗೊoಡ ಒಟ್ಟು ೦೬ ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ಸದರಿ ತಂಡಗಳು ಆರೋಪಿಗಳ ಪತ್ತೆಗಾಗಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!