ಪುಲ್ವಾಮಾದಲ್ಲಿ ತಪ್ಪಿದ ಭಾರೀ ದುರಂತ: 30 ಕೆಜಿ ಸ್ಫೋಟಕ ನಾಶ ಪಡಿಸಿದ ಭದ್ರತಾಪಡೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಬುಧವಾರ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಯನ್ನು ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.

ಪುಲ್ವಾಮಾ ಪೊಲೀಸರ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಪುಲ್ವಾಮಾದ ಸರ್ಕ್ಯುಲರ್ ರಸ್ತೆಯ ತಹಾಬ್ ಕ್ರಾಸಿಂಗ್ ಬಳಿ 25 ರಿಂದ 30 ಕೆಜಿ ಐಇಡಿ ವಶಪಡಿಸಿಕೊಂಡಿವೆ. , ಕಾಶ್ಮೀರ ವಲಯ ಪೊಲೀಸ್ ಎಡಿಜಿಪಿ ವಿಜಯ್ ಕುಮಾರ್ ಪ್ರಕಾರ, “ಪೊಲೀಸ್ ಮತ್ತು ಭದ್ರತಾ ಪಡೆಗಳು ಪುಲ್ವಾಮಾದ ವೃತ್ತಾಕಾರದ ರಸ್ತೆಯ ತಹಾಬ್ ಕ್ರಾಸಿಂಗ್ ಬಳಿ ಸುಮಾರು 25 ರಿಂದ 30 ಕೆಜಿ ತೂಕದ ಐಇಡಿ ವಶಪಡಿಸಿಕೊಂಡಿದ್ದಾರೆ. ಪುಲ್ವಾಮಾ ಪೊಲೀಸರು ನೀಡಿದ ನಿರ್ದಿಷ್ಟ ಇನ್‌ಪುಟ್‌ನಿಂದ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ. ಇಂದು ಬೆಳಗ್ಗೆ 7.50ರ ಸುಮಾರಿಗೆ ಪತ್ತೆಯಾದ ಐಇಡಿಯನ್ನು ಈಗ ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!