IND VS AUS | ಟಾಸ್ ಗೆದ್ದ ಆಸ್ಟ್ರೇಲಿಯಾ, ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಮೇಜರ್ ಚೇಂಜಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಆಸ್ಟ್ರೇಲಿಯಾ ನಡುವಣ ಮೂರನೇ ಏಕದಿನ ಪಂದ್ಯ ಆರಂಭವಾಗಿದ್ದು, ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ.

ಇದೀಗ ಆಸ್ಟ್ರೇಲಿಯಾ ಟಾಸ್ ಗೆದ್ದಿದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನು ಟೀಂ ಇಂಡಿಯಾದ ಪ್ಲೇಯಿಂಗ್ 11 ನಲ್ಲಿ ಮಹತ್ವದ ಬದಲಾವಣೆಗಳಾಗಿವೆ.

ವಿಶ್ರಾಂತಿಯಲ್ಲಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ವಾಪಾಸಾಗಿದ್ದಾರೆ. ಇನ್ನು ಗಾಯಗೊಂಡಿದ್ದ ಅಕ್ಷರ್ ಪಟೇಲ್ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮದ್ ಶಮಿ ಕೂಡ ಪಂದ್ಯದಿಂದ ಹೊರಗುಳಿದಿದ್ದಾರೆ.

ಪ್ಲೇಯಿಂಗ್ 11 ಹೀಗಿದೆ..

  1. ರೋಹಿತ್ ಶರ್ಮಾ
  2. ವಿರಾಟ್ ಕೊಹ್ಲಿ
  3. ಶ್ರೇಯಸ್ ಅಯ್ಯರ್
  4. ಕೆಎಲ್ ರಾಹುಲ್
  5. ಸೂರ್ಯಕುಮಾರ್ ಯಾದವ್
  6. ರವೀಂದ್ರ ಜಡೇಜಾ
  7. ವಾಷಿಂಗ್ಟನ್ ಸುಂದರ್
  8. ಕುಲ್ದೀಪ್ ಯಾದವ್
  9. ಜಸ್​ಪ್ರೀತ್ ಬುಮ್ರಾ
  10. ಮೊಹಮ್ಮದ್ ಸಿರಾಜ್
  11. ಪ್ರಸಿದ್ಧ್ ಕೃಷ್ಣ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!