ಸರ್ಚ್‌ ಎಂಜಿನ್‌ ದೈತ್ಯ ಗೂಗಲ್‌ಗೆ ಇಂದು 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸರ್ಚ್ ಎಂಜಿನ್ ದೈತ್ಯ ಎಂದೇ ಕರೆಯಲಾಗುವ ಗೂಗಲ್‌ಗೆ ಇಂದು 25ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಇಂದು ವಿಶೇಷವಾದ ಡೂಡಲ್‌ನೊಂದಿಗೆ ತನ್ನ ಹುಟ್ಟುಹಬ್ಬವನ್ನು ಗೂಗಲ್ ಆಚರಿಸಿಕೊಂಡಿದೆ.‌

ಇಂದು ನೀವು ಗೂಗಲ್‌ ನ ಹೊಸ ಟ್ಯಾಬ್ ತೆರೆದರೆ GIFನೊಂದಿಗೆ ಆರಂಭವಾಗುತ್ತದೆ. ಅದು ‘Google’ ಅನ್ನು ‘G25gle’ ಆಗಿ ಪರಿವರ್ತಿಸುತ್ತದೆ. 25-ಎಂಬುದು ವರ್ಷಗಳನ್ನು ಸೂಚಿಸುತ್ತದೆ.

ಡೂಡಲ್‌ ಮೂಲಕ ಗೂಗಲ್‌, ಈ 25 ವರ್ಷಗಳು ತಾನು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದೆ. ಗೂಗಲ್‌ ಸಂಸ್ಥೆಯು ಇಲ್ಲಿಯವರೆಗೆ ಕಂಡ ಮಹತ್ತರ ಹೆಜ್ಜೆಗಳ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ.

“ಇಂದಿನ ಡೂಡಲ್ ಗೂಗಲ್​ನ 25ನೇ ವರ್ಷವನ್ನು ಆಚರಿಸುತ್ತಿದೆ. ಇಲ್ಲಿ ಭವಿಷ್ಯದ ಬಗ್ಗೆ ಗಮನಹರಿಸುತ್ತೇವೆ. ಇದು ಜನ್ಮದಿನವನ್ನು ಪ್ರತಿಬಿಂಬಿಸುವ ಸಮಯವೂ ಹೌದು. 25 ವರ್ಷಗಳ ಹಿಂದೆ ಹೇಗೆ ಹುಟ್ಟಿತು ಎಂಬುದನ್ನು ತಿಳಿದುಕೊಳ್ಳಲು ನೆನಪಿನ ಹಾದಿಯಲ್ಲಿ ನಡೆಯೋಣ” ಎಂದು ಕಂಪನಿ ತನ್ನ ಬ್ಲಾಗ್​ನಲ್ಲಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!