ಹೊಸದಿಗಂತ ವರದಿ, ಮೈಸೂರು:
ಆಪೇ ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ನರಸೀಪುರ ತಲಕಾಡು ಮುಖ್ಯರಸ್ತೆ ಸಮೀಪದಲ್ಲಿ ಘಟನೆ ಸಂಭವಿಸಿದೆ.
ಮೈಸೂರಿನ ರಾಜೀವ್ ನಗರ ನಿವಾಸಿ ಹುಸ್ಮಾನ್ (35) ಮೃತ ದುರ್ದೈವಿ.
ತಿ.ನರಸೀಪುರ ತಾಲ್ಲೂಕಿನ ಬಿ.ಶೆಟ್ಟಹಳ್ಳಿ ಗ್ರಾಮದಲ್ಲಿರುವ ಪತ್ನಿಯ ನಿವಾಸಕ್ಕೆ ಬೈಕ್‌ನಲ್ಲಿ ಹುಸ್ಮಾನ್ ತೆರಳುತ್ತಿದ್ದಾಗ, ಆಪೇ ಆಟೋ ಡಿಕ್ಕಿ ಹೊಡೆದು, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತಿ.ನರಸೀಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.