ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಟೋ ಚಾಲಕನೋರ್ವ ತಪ್ಪಾದ ಜಾಗಕ್ಕೆ ಮಹಿಳೆಯನ್ನು ಕರೆದೊಯ್ಯಲು ಯತ್ನಿಸಿದ್ದು, ಭಯಗೊಂಡ ಮಹಿಳೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಸೇಫ್ ಆದ ಘಟನೆ ಹೆಬ್ಬಾಳದ ವೀರಣ್ಣಪಾಳ್ಯ ಬಳಿ ಗುರುವಾರ ರಾತ್ರಿ ನಡೆದಿದೆ.
KA 03 AM 89566 ನೋಂದಣಿಯ ಆಟೋ ಚಾಲಕ ಈ ಕೃತ್ಯವೆಸಗಿದ್ದಾನೆ. ಮಹಿಳೆ ಹೊರಮಾವಿನಿಂದ ಥಣಿಸಂದ್ರಗೆ ಆಟೋ ಬುಕ್ ಮಾಡಿದ್ದರು. ಚಾಲಕ ಮಹಿಳೆಯನ್ನು ತಪ್ಪಾದ ಜಾಗಕ್ಕೆ ಕರೆದುಕೊಂಡು ಹೋಗುತ್ತಿದ್ದ. ಆಟೋ ನಿಲ್ಲಿಸಿ ಎಂದು ಕೂಗಾಡಿದರೂ ಆಟೋ ಚಾಲಕ ನಿಲ್ಲಿಸಲಿಲ್ಲ. ಚಾಲಕನ ವರ್ತನೆಯಿಂದ ಭಯಗೊಂಡು ಚಲಿಸುತ್ತಿದ್ದ ಆಟೋದಿಂದ ಜಿಗಿದು ಮಹಿಳೆ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.