September 23, 2026
Wednesday, September 23, 2026
spot_img

ಸೆಪ್ಟೆಂಬರ್ 1ರಿಂದ ದಕ್ಷಿಣ ಕನ್ನಡದಲ್ಲಿ ಆಟೋ ಪ್ರಯಾಣ ದುಬಾರಿಯಾಗಿದೆ: ಹೊಸ ದರ ಎಷ್ಟಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆಟೋ ರಿಕ್ಷಾ ಪ್ರಯಾಣದ ದರವನ್ನು ಪರಿಷ್ಕರಿಸಲಾಗಿದ್ದು, ಸೆಪ್ಟೆಂಬರ್ 1ರಿಂದ ಅಂದ್ರೆ ಇಂದಿನಿಂದ ಹೊಸ ದರ ಅಧಿಕೃತವಾಗಿ ಜಾರಿಗೆ ಬಂದಿದೆ.

ಉಪ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇಡೀ ಜಿಲ್ಲೆಗೆ ಇಂದಿನಿಂದ ಒಂದೇ ಮಾದರಿಯ ದರ ಅನ್ವಯವಾಗಲಿದೆ.

ಹೊಸ ದರ ಹೇಗಿದೆ?

ಪರಿಷ್ಕೃತಗೊಂಡಿರುವ ಹೊಸ ದರದ ಪ್ರಕಾರ 1.5 ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ 40 ರೂ ನಿಗದಿಪಡಿಸಲಾಗಿದೆ. ನಂತರದ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 20 ರೂ ಶುಲ್ಕ ವಿಧಿಸಲಾಗುತ್ತದೆ. ಈ ರೇಟ್ ಗರಿಷ್ಠ ಮೂರು ಪ್ರಯಾಣಿಕರಿಗೆ ಅನ್ವಯವಾಗಲಿದೆ.

ವೈಟಿಂಗ್ ಚಾರ್ಜಸ್ ನಲ್ಲೂ ಬದಲಾವಣೆ

ಕಾಯುವ ಶುಲ್ಕದಲ್ಲೂ ಬದಲಾವಣೆ ಮಾಡಲಾಗಿದ್ದು, ಮೊದಲ 10 ನಿಮಿಷ ಉಚಿತವಾಗಿರುತ್ತದೆ. ಅದಾದ ಬಳಿಕ ಪ್ರತಿ 15 ನಿಮಿಷಕ್ಕೆ 5 ರೂ ಶುಲ್ಕ ಪಾವತಿಸಬೇಕಾಗುತ್ತದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಪ್ರಯಾಣಿಸಿದರೆ ಸಾಮಾನ್ಯ ಮೀಟರ್ ದರಕ್ಕಿಂತ 1.5 ಪಟ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಇದನ್ನೂ ಓದಿ:

ಸಾಮಾನು ಸಾಗಣೆಗೂ ಹೊಸ ರೂಲ್ಸ್

ಸಾಮಾನು ಸಾಗಣೆಗೂ ಹೊಸ ನಿಯಮ ಜಾರಿಯಾಗಿದ್ದು, ಒಬ್ಬ ಪ್ರಯಾಣಿಕನೊಂದಿಗೆ 20 ಕೆ.ಜಿ.ವರೆಗೆ ಲಗೇಜ್‌ಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. 20 ಕೆ.ಜಿ. ಮೀರಿದ ಪ್ರತಿ ಹೆಚ್ಚುವರಿ 20 ಕೆ.ಜಿ.ಗೆ 5 ರೂ ಶುಲ್ಕ ನಿಗದಿಪಡಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !