ಬುನಾದಿಯ ಕಲ್ಲುಗಳ ಮೇಲೆ ಶ್ರೀರಾಮನ ಹೆಸರು

ಹೊಸದಿಗಂತ ಡಿಜಿಟಲ್ ಡೆಸ್ಕ್

ಅಯೋಧ್ಯೆ: ಧರ್ಮ ನಗರಿ ಅಯೋಧ್ಯೆಯಲ್ಲಿ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ‘ರಾಮ್ ಸೇ ಬಡಾ ರಾಮ್ ಕಾ ನಾಮ್, ರಾಮ್ ಸೇ ಬಡಾ ರಾಮ್ ಕಾ ನಾಮ್… ಈ ಹಾಡು ಕೇಳುವುದು ಸಾಮಾನ್ಯ. ಇದು ವಿಜಯ ಮಂತ್ರವೂ ಆಗಿದೆ. ಹಾಗಾಗಿ ರಾಮ ಮಂದಿರ ನಿರ್ಮಾಣದಲ್ಲೂ ಇದು ಬಳಕೆಯಾಗುತ್ತದೆ. ಹೇಗೆ ಅಂತೀರಾ?

ಇದೇ ವಿಜಯ ಜಪವನ್ನು ಮಂದಿರ ನಿರ್ಮಾಣದ ಕಲ್ಲುಗಳ ಮೇಲೂ ಬರೆಯಲಾಗುತ್ತಿದೆ. ರಾಮ ಜನ್ಮಭೂಮಿಯಲ್ಲಿ ಭವ್ಯವಾದ ಮಂದಿರ ನಿರ್ಮಿಸಲಾಗುತ್ತಿದೆ. ಆದರೆ ಈ ನಿರ್ಮಾಣವನ್ನು ಭಗವಾನ್ ರಾಮನ ಹೆಸರಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ. ಆದ್ದರಿಂದ ತಳಪಾಯಕ್ಕೆ ಬಳಸಲಾಗುವ ಕಲ್ಲುಗಳ ಮೇಲೆ ಶ್ರೀರಾಮನ ಹೆಸರನ್ನು ಬರೆದ ನಂತರವೇ ಅದನ್ನು ಒಂದರ ಮೇಲೊಂದು ಅಳವಡಿಸಲಾಗುತ್ತಿದೆ.

ಶ್ರೀರಾಮ ಶ್ರೀಲಂಕಾದಿಂದ ಸೀತೆಯನ್ನು ಮರಳಿ ಕರೆತರಲು ಸಮುದ್ರದ ಮೇಲೆ ಕಲ್ಲಿನ ಸೇತುವೆಯನ್ನು ಸಿದ್ಧಪಡಿಸಿದಾಗಲೂ ಅಲ್ಲಿ ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆಯಲಾಗಿತ್ತು ಎಂಬುದು ನಂಬಿಕೆ. ಸೇತುವೆಯ ನಿರ್ಮಾಣದ ಸಮಯದಲ್ಲಿ ಕಲ್ಲುಗಳು ಮುಳುಗದಂತೆ ರಕ್ಷಿಸಲು ರಾಮನ ಹೆಸರನ್ನು ಬರೆಯಲಾಗಿದೆ. ಇಂದಿಗೂ ಭಗವಾನ್ ರಾಮನ ಹೆಸರನ್ನು ಮಹಾನ್ ಶಕ್ತಿ, ರಾಮನ ನಾಮವು ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಮತ್ತು ಮೋಕ್ಷದ ಮೂಲವಾಗಿದೆ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಮಂದಿರ ನಿರ್ಮಾಣಕ್ಕೆ ಬಳಸುವ ಕಲ್ಲುಗಳ ಮೇಲೆ ರಾಮನ ಹೆಸರನ್ನು ಬರೆಯಲಾಗುತ್ತಿದೆ ಎಂದು ರಾಮಮಂದಿರದ ಅರ್ಚಕ ಸತ್ಯೇಂದ್ರದಾಸ್ ಹೇಳುತ್ತಾರೆ.

ಏ. 1ರಂದು ಅಯೋಧ್ಯೆ ರಾಮ ಜನ್ಮಭೂಮಿಗೆ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಕಲ್ಲಿನ ಮೇಲೆ ಶ್ರೀರಾಮನ ಹೆಸರಿನ ಅಚ್ಚು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!