ಅಯೋಧ್ಯೆಯಲ್ಲಿ ಕರಸೇವೆಗಿಲ್ಲ ಅವಕಾಶ, ಮತ್ಯಾವುದಕ್ಕಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಅಯೋಧ್ಯೆ: ಜಗತ್ತಿನ ಎಲ್ಲಾ ಹಿಂದುಗಳ ಅಪೇಕ್ಷೆಯಂತೆ ಭಾರತದ ಅಸ್ಮಿತೆಯಾದ ಜನ್ಮಭೂಮಿ ರಾಮ ಮಂದಿರ ನಿರ್ಮಾಣ ಪ್ರಗತಿಯಲ್ಲಿದೆ. ಮೂವತ್ತು ವರ್ಷಗಳ ಹಿಂದೆ ಕರಸೇವೆ ಮಾಡಿದವರು ಸೇರಿದಂತೆ ದೇಶಾದ್ಯಂತ ರಾಮಭಕ್ತರು ಜನ್ಮಭೂಮಿಯಲ್ಲಿ ಕರಸೇವೆ ಮಾಡಲು ಕಾತರಿಸುತ್ತಿದ್ದಾರೆ. ಆದರೆ ಸದ್ಯಕ್ಕಂತು ಅದಕ್ಕೆ ಅವಕಾಶವಿಲ್ಲ.

ಹೌದು, ನಿನ್ನೆ ನಡೆದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸಭೆಯಲ್ಲಿ ಕೇವಲ ಮಂದಿರ ನಿರ್ಮಾಣ ಕಾರ್ಯ ವೀಕ್ಷಣೆ ಮಾತ್ರ ಅವಕಾಶವೆಂದು ತೀರ್ಮಾನಿಸಲಾಗಿದೆ.

ಮಂದಿರವನ್ನು ಸಂಪೂರ್ಣವಾಗಿ ಶಿಲೆಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಬೃಹತ್ ಶಿಲಾ ಕಲ್ಲುಗಳನ್ನು ದೊಡ್ಡ ದೊಡ್ಡ ಕ್ರೇನ್ ಬಳಸಿ ಅಳವಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಕರಸೇವೆಗೆ ಅವಕಾಶವಿಲ್ಲ. ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು, ದರ್ಶನಾ ಮಾರ್ಗದಲ್ಲಿರುವ ಗ್ಯಾಲರಿ ಮೂಲಕ ಮಂದಿರ ನಿರ್ಮಾಣ ಕೆಲಸ ವೀಕ್ಷಿಸಬಹುದಾಗಿದೆ.

ಫಕೀರ ರಾಮ ಮಂದಿರದಲ್ಲಿ ಅಖಂಡ ಭಜನೆ
ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗುವಾಗ ಅಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಲು ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಹಿರಿಯರಾದ ಕೇಶವ ಪರಾಶನ್ ಹಾಗೂ ಖಜಾಂಜಿ ಗೋವಿಂದ ದೇವ್‌ಗಿರಿ ಮತ್ತು ಟ್ರಸ್ಟ್‌ನಲ್ಲಿರುವ ಇತರ ಸಂತರು ಜನ್ಮಭೂಮಿಯಲ್ಲಿ ಅಖಂಡ ಭಜನೆ ನಡೆಸಲು ಸಲಹೆ ನೀಡಿದ್ದರು. ಈ ಸಲಹೆಯಂತೆ ಅಯೋಧ್ಯೆಯ ಫಕೀರ ರಾಮ ಮಂದಿರದಲ್ಲಿ ಅಖಂಡ ಭಜನೆ ಪ್ರಾರಂಭವಾಗಿದೆ. ಅಷ್ಟೇ ಅಲ್ಲ, ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ಸ್ಥಳದ ಬಳಿ ನಿತ್ಯ ವೇದ ಮಂತ್ರಗಳೊಂದಿಗೆ ಯಜ್ಞವನ್ನು ಆರಂಭಿಸಲಾಗಿದೆ.

ರಾಮ ಭಜನೆ ಮಾಡಲು ಎಲ್ಲರಿಗೂ ಅವಕಾಶ
ದೇಶದ ಯಾವುದೇ ಊರುಗಳಿಂದ ಅಯೋಧ್ಯೆಗೆ ಬಂದು ಭಜನೆ ಮಾಡಬಹುದು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅಥವಾ ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ ಅವರನ್ನು ಸಂಪರ್ಕಿಸಿದರೆ, ಭಜಕರಿಗೆ ಭಜನೆ ಮಾಡಲು ಸ್ಥಳ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ಉಳಿದ ವ್ಯವಸ್ಥೆಗಳನ್ನು ಅವರವರೇ ಮಾಡಿಕೊಳ್ಳಬೇಕೆಂದು ಎಂದು ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!