ಜಹಾಂಗೀರ್ಪುರಿಯ ಅಕ್ರಮ ಕಟ್ಟಡ ತೆರವಿಗೆ ಸುಪ್ರೀಕೋರ್ಟ್ ತಡೆ, ತಿರುವು ಪಡೆದುಕೊಳ್ಳುತ್ತಿದೆ ಕಲ್ಲುತೂರಾಟ ಹಿನ್ನೆಲೆಯ ಪ್ರಕರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಹಾಂಗೀರ್‌ ಪುರಿಯ ಕಲ್ಲು ತೂರಾಟದ ಪ್ರಕರಣವು ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ತಡೆಯಾಜ್ಞೆ ನೀಡಲಾಗಿದೆ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಬುಲ್ಡೋಜರ್‌ ಗಳು ಕಾರ್ಯ ಪ್ರಾರಂಭಿಸಿದ ಒಂದು ಗಂಟೆಯಲ್ಲೇ ಕೆಲಸವನ್ನು ನಿಲ್ಲಿಸಲು ಆದೇಶಿಸಲಾಗಿದ್ದು ಗುರುವಾರ ವಿಚಾರಣೆ ನಡೆಸುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಆದರೂ ಅಧಿಕಾರಿಗಳು ತೆರವು ಕಾರ್ಯ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಜಹಾಂಗೀರ್‌ ಪುರಿಯಲ್ಲಿ ಕೋಮುಸಂಘರ್ಷ ಭುಗಿಲೆದ್ದ ಕೆಲವೇ ದಿನಗಳಲ್ಲಿ ತೆರವು ಕಾರ್ಯ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಗರಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು. ವಿಶೇಷವಾಗಿ ಜಹಾಂಗೀರ್‌ ಪುರಿಯಲ್ಲಿ ಹೆಚ್ಚಿನ ನಿಗಾ ವಹಿಸಲು ಸಿಆರ್‌ಪಿಎಫ್‌ನ 12 ತುಕಡಿಗಳನ್ನು ನಿಯೋಜಿಸಲಾಗಿದೆ.

ಈ ಘರ್ಷಣೆಗೆ ಸಂಬಂಧಿಸಿದಂತೆ ಅನ್ಸಾರ್‌ ಮತ್ತು ಸಲೀಂ ಎಂಬ ಇಬ್ಬರನ್ನು ಬಂಧಿಸಲಾಗಿತ್ತು. ಸದ್ಯ ಇವರನ್ನು ಎರಡು ದಿನಗಳ ಪೋಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಕುರಿತು ಕೋರ್ಟ್‌ ತನಿಖೆಯು ಸರಿಯಾಗಿ ನಡೆದಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಪೋಲೀಸರಿಗೆ ಆದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!