October 2, 2026
Friday, October 2, 2026
spot_img

ಆಯುರ್ವೇದ ವೈದ್ಯ ರಮೇಶ ಕಲ್ಗುಟ್ಕರ್ ಹ*ತ್ಯೆ ಪ್ರಕರಣ: ಆರೋಪಿ ಅರೆಸ್ಟ್

ಹೊಸದಿಗಂತ ವರದಿ ಕಾರವಾರ :

ಕಾರವಾರ ಜಿಲ್ಲೆಯ ಶಿರಸಿಯ ಕೆ.ಎಚ್.ಬಿ ಕಾಲನಿಯ ನಿವಾಸಿ ಆಯುರ್ವೇದ ವೈದ್ಯ ರಮೇಶ ಕಲ್ಗುಟ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠ ದೀಪನ್.ಎನ್.ಎಂ ತಿಳಿಸಿದ್ದಾರೆ.

ಕೊಲೆಗೆ ಬಳಸಿದ ಆಯುಧದ ಕುರಿತಂತೆ ಆರೋಪಿಯ ವಿಚಾರಣೆ ನಡೆಸಲಾಗುತ್ತಿದ್ದು ವೈದ್ಯ ರಮೇಶ ಕಲ್ಗುಟ್ಕರ್ ಅವರ ಪರಿಚಯಸ್ಥರೇ ಕೃತ್ಯ ಎಸಗಿರುವುದಾಗಿ ಪೊಲೀಸ್ ವರಿಷ್ಠರು ಹೇಳಿದ್ದಾರೆ.

ಇದನ್ನೂ ಓದಿ:

ಮೊದಲನೇ ಹೆಂಡತಿ ತೀರಿ ಹೋಗಿದ್ದು ಇಬ್ಬರೂ ಮಕ್ಕಳು ದೂರದ ಪ್ರದೇಶಗಳಲ್ಲಿ ವಾಸವಾಗಿರುವುದರಿಂದ ವೈದ್ಯ ರಮೇಶ ಕಲ್ಗುಟ್ಕರ್ ಅವರು ಎರಡನೇ ಮದುವೆಗೆ ಸಿದ್ಧರಾಗಿದ್ದರು ಮದುವೆಗೆಂದು ಸಾಕಷ್ಟು ಬಂಗಾರ ತಂದು ಮನೆಯಲ್ಲಿರಿಸಿದ್ದು ಅವು ಕಾಣೆಯಾಗಿವೆ ಆ ಕುರಿತಂತೆ ಬಂಧಿತನ ವಿಚಾರಣೆ ನಡೆಸಲಾಗುತ್ತಿದ್ದು ಬಂಧಿತ ವ್ಯಕ್ತಿ ಅವರ ಕುಟುಂಬದವರು ಅಲ್ಲವಾಗಿದ್ದರೂ ವೈದ್ಯರೊಂದಿಗೆ ಪರಿಚಯ ಇರುವ ವ್ಯಕ್ತಿಯೇ ಆಗಿದ್ದಾರೆ ತನಿಖೆ ಪೂರ್ಣಗೊಂಡ ನಂತರ ಎಲ್ಲಾ ಮಾಹಿತಿ ಹಂಚಿಕೊಳ್ಳುಲಾಗುವುದು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಪೊಲೀಸ್ ವರಿಷ್ಠ ದೀಪನ್.ಎನ್.ಎಂ ತಿಳಿಸಿದ್ದಾರೆ.

Must Read