May 15, 2026
Friday, May 15, 2026
spot_img

Gym Motivation | ಜಿಮ್ ಹೋಗೋ ಆಸೆ ಇದೆ… ಆದರೆ ಸೋಮಾರಿತನ ಬಿಡೋದು ಹೇಗೆ?

ಜಿಮ್ ಸೇರೋಕೆ ಮನಸ್ಸಿದೆ, ಆದರೆ ಪ್ರತಿದಿನ ‘ನಾಳೆಯಿಂದ ಶುರು ಮಾಡ್ತೀನಿ’ ಅನ್ನೋದು ಹಲವರ ಕಥೆ. ಸೋಮಾರಿತನವೇ ಫಿಟ್ನೆಸ್‌ಗೆ ದೊಡ್ಡ ಅಡ್ಡಿ. ಆದರೆ ಕೆಲವು ಸಣ್ಣ ಟ್ರಿಕ್ಸ್ ಬಳಸಿದ್ರೆ ಈ ಹವ್ಯಾಸವನ್ನು ನಿಧಾನವಾಗಿ ಬದಲಿಸಬಹುದು.

ಸಣ್ಣ ಸ್ಟಾರ್ಟ್ ಮಾಡಿ
ಮೊದಲ ದಿನವೇ ಹೆವಿ ವರ್ಕೌಟ್ ಬೇಡ. ಕೇವಲ 20 ನಿಮಿಷ ಜಿಮ್‌ಗೆ ಹೋಗಿ ಲೈಟ್ ವ್ಯಾಯಾಮ ಮಾಡಿ. ಸಣ್ಣ ಆರಂಭವೇ ಮುಂದುವರಿಸಲು ಸಹಾಯ ಮಾಡುತ್ತದೆ.

ಟೈಮ್ ಫಿಕ್ಸ್ ಮಾಡಿ
ಪ್ರತಿದಿನ ಒಂದೇ ಸಮಯದಲ್ಲಿ ಜಿಮ್‌ಗೆ ಹೋಗುವ ಅಭ್ಯಾಸ ಮಾಡ್ಕೊಂಡ್ರೆ ಅದು ರೂಟೀನ್ ಆಗುತ್ತದೆ. ಬೆಳಗ್ಗೆ ಅಥವಾ ಸಂಜೆ ನಿಮ್ಮ ಅನುಕೂಲಕ್ಕೆ ತಕ್ಕ ಸಮಯ ಆರಿಸಿ.

ಇದನ್ನೂ ಓದಿ:

ಜಿಮ್ ಫ್ರೆಂಡ್ ಹುಡುಕಿ
ಒಬ್ಬ ಸ್ನೇಹಿತ ಜೊತೆಗೆ ಹೋದ್ರೆ ಮೋಟಿವೇಷನ್ ಡಬಲ್ ಆಗುತ್ತದೆ. ಒಬ್ಬರನ್ನೊಬ್ಬರು ಪುಷ್ ಮಾಡಿಕೊಳ್ಳಬಹುದು.

ಗೋಲ್ ಕಣ್ಣ ಮುಂದೆ ಇರಲಿ
ತೂಕ ಇಳಿಸಿಕೊಳ್ಳೋದು, ಫಿಟ್ ಆಗೋದು ಅಥವಾ ಮಸಲ್ ಬಿಲ್ಡ್ ನಿಮ್ಮ ಗುರಿಯನ್ನು ನೆನಪಿನಲ್ಲಿ ಇಟ್ಟುಕೊಂಡ್ರೆ ಸೋಮಾರಿತನ ಕಡಿಮೆ ಆಗುತ್ತದೆ.

ನಿರಂತರತೆ ಇರಲಿ
ಒಂದು ದಿನ ಮಿಸ್ ಆಯ್ತು ಅಂದ್ರೆ ಬಿಡಬೇಡಿ. ಮತ್ತೆ ಮುಂದಿನ ದಿನ ಶುರು ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !