ಅಮೃತಯಾತ್ರೆ: ವೈದ್ಯರು-ಶುಶ್ರೂಷಕರ ಸಂಖ್ಯೆ ಎಷ್ಟು ಬೆಳೆದಿದೆ ಈ 75 ವರ್ಷಗಳಲ್ಲಿ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ವೈದ್ಯರು ಮತ್ತು ಶುಶ್ರೂಷಕರು ಭಾರತದಲ್ಲಿ ಸೂಕ್ತ ಪ್ರಮಾಣದಲ್ಲಿ ಇಲ್ಲ ಹಾಗೂ ಅವರ ಸಂಖ್ಯೆ ಎಲ್ಲ ಕಡೆಹರಡಿಕೊಂಡಿಲ್ಲ ಎಂಬ ಅಳಲನ್ನಂತೂ ಯಾರೂ ತಳ್ಳಿಹಾಕುವಂತಿಲ್ಲ.

ಅಷ್ಟಾಗಿಯೂ ಸ್ವಾತಂತ್ರ್ಯ ಬಂದ ನಂತರದ ಇಷ್ಟು ವರ್ಷಗಳಲ್ಲಿ ಆಗಿರುವ ಪ್ರಗತಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಲ್ಲವೇ? ಈ ನಿಟ್ಟಿನಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಂಶೋಧನಾ ವಿಭಾಗವು ಒದಗಿಸಿರುವ ಕೆಲವು ಅಂಕಿಅಂಶಗಳು ಹೀಗಿವೆ.

1951ರಲ್ಲಿ  61,840 ವೈದ್ಯರು ಭಾರತದಲ್ಲಿದ್ದರೆ, 2022ರಲ್ಲಿ 13,08,009 ವೈದ್ಯರು ಅಲೋಪತಿ ವೈದ್ಯರು ಭಾರತದಲ್ಲಿದ್ದಾರೆ. ಇವರೊಂದಿಗೆ ಆಯುಶ್ ವಿಭಾಗದ 5.65 ಲಕ್ಷ ವೈದ್ಯರೂ ಸೇವೆಯಲ್ಲಿ ಲಭ್ಯರಿದ್ದಾರೆ.

1951ರಲ್ಲಿ 16,550 ಶುಶ್ರೂಷಕರ ಲಭ್ಯತೆ ಇದ್ದರೆ, 2022ರಲ್ಲಿ ಆ ಸಂಖ್ಯೆ 34,96,000 ತಲುಪಿದೆ.

ವಿಸ್ತೃತ ಬೆಳವಣಿಗೆ ಅಂಕಿಅಂಶಗಳನ್ನು ಈಕೆಳಗೆ ನೋಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!