Saturday, December 9, 2023

Latest Posts

ಜಪಾನಿನಿಂದ ಭಾರತಕ್ಕೆ ಸಿಗಲಿದೆಯೇ ಈ ಸೂಕ್ಷ್ಮ ಅಂಟೆನಾ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಕ್ಷಣಾ ಪರಿಕರಗಳ ವಹಿವಾಟಿಗೆ ಭಾರತ ಮತ್ತು ಜಪಾನ್ 2015ರಲ್ಲಿ ಸಹಿ ಹಾಕಿದ್ದವು. ಅದಾದ ನಂತರ ಪ್ರಥಮ ಬಾರಿಗೆ ಜಪಾನ್ ಭಾರತಕ್ಕೆ ವಿಶಿಷ್ಟ ಅಂಟೆನಾ ಒಂದನ್ನು ರಫ್ತು ಮಾಡಲಿದೆ ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.

ಕೆಲವು ನೌಕೆಗಳಲ್ಲಿ ಉಪಯೋಗಿಸಲಾಗುವ ಈ ಅಂಟೆನಾ, ಮೇಲ್ನೋಟಕ್ಕೆ ಪತ್ತೆಯಾಗದಂತೆ ಇರುತ್ತದೆ. ಹೀಗಾಗಿ ವೈರಿ ಪಡೆಯು ತನ್ನ ತಂತ್ರ ಬಳಸಿ ಈ ಅಂಟೆನಾವನ್ನು ಗುರಿಯಾಗಿಸಿ ತರಂಗ ಹೀರುವ ಅದರ ಸಾಮರ್ಥ್ಯಕ್ಕೆ ಹಾನಿ ಮಾಡುವ ಕ್ರಮ ಅನುಸರಿಸುವುದಕ್ಕೆ ಕಷ್ಟವಾಗುತ್ತದೆ. ಯುನಿಕಾರ್ನ್ ಎಂದೇ ಈ ಅಂಟೆನಾವನ್ನು ಕರೆಯಲಾಗುತ್ತದೆ. ಏಕೆಂದರೆ ಒಂದು ಬಿರಡೆ ಮೇಲೆ ಹಲವು ಅಂಟೆನಾ ಸರಳುಗಳಿದ್ದು ಅವೆಲ್ಲವೂ ತಕ್ಷಣ ಗುರುತಿಸಲಾಗದಂತೆ ಮರೆಯಾಗಿರುತ್ತವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!