ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ: ಮೈಸೂರಿನಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಹೊಸದಿಗಂತ ವರದಿ,ಮೈಸೂರು:

ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕಗೊಂಡ ಹಿನ್ನಲೆಯಲ್ಲಿ ಶನಿವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸಂಭ್ರಮಾಚರಣೆ ಮಾಡಿದರು.

ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಪಕ್ಷದ ನಾಯಕರ ಭಾವಚಿತ್ರಗಳನ್ನಿಡಿದು ಜಮಾಯಿಸಿದ ಕಾರ್ಯಕರ್ತರು ಹಾಗೂ ಮುಖಂಡರು ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ, ಪಕ್ಷದ ವರಿಷ್ಠರು ಬಿ.ವೈ.ವಿಜಯೇಂದ್ರರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಕ್ರಮ ಸರಿಯಾಗಿದೆ. ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ, ಉಪಚುನಾವಣೆಗಳಲ್ಲಿ ಉಸ್ತುವಾರಿಯನ್ನು ವಹಿಸಿಕೊಂಡು ಚೆನ್ನಾಗಿ ಕೆಲಸ ನಿರ್ವಹಿಸಿದ್ದಾರೆ. ರಾಜ್ಯಾದ್ಯಾಂತ ಜನರಿಗೆ ಪರಿಚಯವಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಪುತ್ರ ಎಂಬ ಕಾರಣಕ್ಕೆ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರರನ್ನು ನೇಮಕ ಮಾಡಿಲ್ಲ, ಬದಲಾಗಿ ಅವರು ಉಪಚುನಾವಣೆಗಳಲ್ಲಿ ನಿರ್ವಹಿಸಿದ ಉಸ್ತುವಾರಿ, ಮಾಡಿದ ಕಾರ್ಯತಂತ್ರಗಳು, ಹಾಗೂ ಬಿ.ಎಸ್.ಯಡಿಯೂರಪ್ಪರ ಜೊತೆಗಿದ್ದು ಸರ್ಕಾರ, ಪಕ್ಷವನ್ನು ಮುನ್ನೇಡೆಸುವ ರೀತಿಯನ್ನು ನೋಡಿ, ಅನುಭವಗಳಿಸಿರುವ ಬಿ.ವೈ.ವಿಜಯೇಂದ್ರರಿಗೆ ಇರುವ ಸಾಮಾರ್ಥ್ಯವನ್ನು ಓರೆಗಲ್ಲಿಗೆ ಹಚ್ಚಿ ನೋಡಿದ ಪಕ್ಷದ ಹೈಕಮಾಂಡ್ ಕೊನೆಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದೆ ಎಂದು ತಿಳಿಸಿದರು.

ನೆರೆ ರಾಜ್ಯಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಗಳನ್ನು ಯುವಕರಿಗೆ ನೀಡಲಾಗಿದೆ. ಆ ಮೂಲಕ ಯುವ ಸಮುದಾಯಕ್ಕೆ ಮನ್ನಣೆ ನೀಡುವಂತಹ ಪ್ರಯೋಗವನ್ನು ಹೈಕಮಾಂಡ್ ಮಾಡಿದೆ. ಅದೇ ತಂತ್ರವನ್ನೂ ನಮ್ಮ ರಾಜ್ಯದಲ್ಲೂ ಮಾಡಿದೆ. ಇದರಿಂದಾಗಿ ಹೊಸ ಮತದಾರರು ಹಾಗೂ ಯುವಕರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನವನ್ನು ಬಿ.ವೈ.ವಿಜಯೇಂದ್ರರವರು ಮಾಡಲಿದ್ದಾರೆ. ಬೇರೆ ಪಕ್ಷಗಳಿಂದಲೂ ಮುಖಂಡರುಗಳು ಪಕ್ಷಕ್ಕೆ ಬರಲಿದ್ದಾರೆ ಎಂದು ಹೇಳಿದರು.

ಈ ವೇಳೆ ಬಿಜೆಪಿ ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್ ನಗರ ಪ್ರಧಾನಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ವಾಣೀಶ್, ಸೋಮಸುಂದರ್, ಓಬಿಸಿ ಅಧ್ಯಕ್ಷ ಜೋಗಿ ಮಂಜು, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಸಂಚಾಲಕ ಪ್ರದೀಪ್‌ಕುಮಾರ್, ವಕ್ತಾರರಾದ ಮೋಹನ್, ವಸಂತ್, ನಗರಪಾಲಿಕೆಯ ಉಪಮೇಯರ್ ರೂಪ, ಬಿ.ಎಂ.ಸAತೋಷ್‌ಕುಮಾರ್ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಇದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!