Friday, June 2, 2023

Latest Posts

ಬಾಬುರಾವ್ ಚಿಂಚನಸೂರ್ ಅಲ್ಲ ‘ಚಂಚಲ ಸೂರ’ : ಎನ್.ರವಿಕುಮಾರ್ ಲೇವಡಿ

ಹೊಸದಿಗಂತ ವರದಿ ಕಲಬುರಗಿ:

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಚಿಂಚನಸೂರ್ ಅಲ್ಲ. ಅವರು ಚಂಚಲ ಸೂರ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಬಾಬುರಾವ್ ಚಿಂಚನಸೂರ್ ವಿರುದ್ಧ ವಾಗ್ದಾಳಿ ನಡೆಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಎಲ್ಲವನ್ನೂ ಅವರಿಗೆ ನೀಡಿತ್ತು. ನಿಗಮ ಮಂಡಳಿ ಅಧ್ಯಕ್ಷ ಹಾಗೂ ಸಾಲದಾಗಿ ವಿಧಾನ ಪರಿಷತ್ ಸದಸ್ಯ ರನ್ನಾಗಿ ಗೌರವದಿಂದ ನಡೆದುಕೊಂಡಿತ್ತು.ಆದರೂ ನಮಗೆ ಅವಮಾನ ಆಗಿದೆ ಎಂದು ಹೇಳಿ ಪಕ್ಷವನ್ನು ತ್ಯಜಿಸಿದರು ಎಂದರು.

ಬಾಬುರಾವ್ ಚಿಂಚನಸೂರ್ ಪಕ್ಷ ತ್ಯಜಿಸಿದ್ದರಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಿಲ್ಲ. ಚುನಾವಣೆ ಬಂದಾಗಲೇ ಅವರಿಗೆ ಅವಮಾನ ಆಯಿತಾ ? ಇಷ್ಟು ದಿನ ಪಕ್ಷದಲ್ಲಿ ಇದ್ದಾಗ ಅವರಿಗೆ ಎನೂ ನೆನಪಾಗಲಿಲ್ಲವೆ ಎಂದು ಪ್ರಶ್ನಿಸಿದರು.

ಇನ್ನೂ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ನಿನಾ೯ಮ ಮಾಡುತ್ತೇನೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು,ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಏನಿದೆ ಎಂಬುದು ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!