ಅನುಮತಿ ಇಲ್ಲದೆ ಬಚ್ಚನ್​ ಫೋಟೋ ಬಳಸುವಂತಿಲ್ಲ: ದೆಹಲಿ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಒಪ್ಪಿಗೆ ಇಲ್ಲದೆ ಹೆಸರು, ಭಾವಚಿತ್ರ, ಧ್ವನಿಯನ್ನು ಬಳಕೆ ಮಾಡದಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.

ಕೌನ್ ಬನೇಗಾ ಕರೋಡ್ಪತಿಯನ್ನು ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದಾರೆ. ಕೆಲ ಮೊಬೈಲ್ ಅಪ್ಲಿಕೇಷನ್​ಗಳು ಕೌನ್​ ಬನೇಗಾ ಕರೋಡ್ಪತಿ ಮಾದರಿಯಲ್ಲಿ ಅಕ್ರಮವಾಗಿ ಲಾಟರಿ ವ್ಯವಹಾರ ಮಾಡಲು ಅಮಿತಾಭ್ ಬಚ್ಚನ್ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಅಮಿತಾಭ್ ವರ್ಚಸ್ಸಿಗೆ ಹಾನಿ ಉಂಟು ಮಾಡುತ್ತಿದೆ. ಈ ಕಾರಣದಿಂದ ಅಮಿತಾಭ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನವೀನ್ ಚಾವ್ಲಾ ಅವರು ಶುಕ್ರವಾರ ಈ ಸಂಬಂಧ ಆದೇಶ ಹೊರಡಿಸಿದ್ದು, ‘ಅಮಿತಾಭ್ ಬಚ್ಚನ್ ಅವರ ಭಾವಚಿತ್ರವನ್ನು ಉದ್ಯಮದ ಪ್ರಮೋಷನ್​ಗೆ ಬಳಕೆ ಮಾಡಬಾರದು. ಇದರಿಂದ ಅರ್ಜಿದಾರರು ಸರಿಪಡಿಸಲಾಗದ ನಷ್ಟ ಮತ್ತು ಹಾನಿಯನ್ನು ಅನುಭವಿಸಬಹುದು. ಕೆಲವು ಚಟುವಟಿಕೆಗಳು ಅವರಿಗೆ ಅಪಖ್ಯಾತಿಯನ್ನು ಸಹ ತರಬಹುದು’ ಎಂದು ಹೇಳಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ 2023 ಮಾರ್ಚ್​​ನಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!