Thursday, March 23, 2023

Latest Posts

ಜಿ-20 ಶೃಂಗಸಭೆ ಹಿನ್ನೆಲೆ 55 ಭಿಕ್ಷುಕರಿಗೆ ಪುನರ್ವಸತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ತಿಂಗಳುಗಳಲ್ಲಿ ಜಿ-20 ಶೃಂಗಸಭೆ ಆರಂಭವಾಗಲಿದ್ದು, ಅತಿಥಿಗಳು ಬೆಂಗಳೂರಿನಲ್ಲಿ ಓಡಾಟ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, 55 ಭಿಕ್ಷುಕರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದ್ದಾರೆ.

ನಗರದ ಪ್ರಮುಖ ವೃತ್ತ, ರಸ್ತೆ, ದೇವಸ್ಥಾನ ಹಾಗೂ ಪ್ರೇಕ್ಷಣೀಯ ಸ್ಥಳಗಳ ಎದುರು ಭಿಕ್ಷಾಟನೆಯಲ್ಲಿ ತೊಡಗಿದ್ದ ಸುಮಾರು 55 ಕ್ಕೂ ಹೆಚ್ಚು ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ಭಿಕ್ಷಾಟನೆಯಲ್ಲಿ ಮಕ್ಕಳ ಸಂಖ್ಯೆಯೂ ಇದೆ, ಮಕ್ಕಳಿಗೆ ನಿದ್ದೆ ಬರುವ ಔಷಧ ಕೊಟ್ಟು ಮಲಗಿಸಿ ಭಿಕ್ಷೆ ಬೇಡುವುದು, ಕಳ್ಳಸಾಗಣಿಕೆ ಮೂಲಕ ಕರೆತಂದು ಭಿಕ್ಷಾಟನೆಗೆ ಕರೆತರಲಾಗಿತ್ತು. ವಿಶೇಷ ಕಾರ್ಯಾಚರಣೆ ವೇಳೆ ವೃದ್ಧರನ್ನು ರಕ್ಷಿಸಿ ಆಶ್ರಯ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!