Saturday, April 1, 2023

Latest Posts

RECRUITMENT | ಜಿಲ್ಲಾ ಸರ್ವೇಕ್ಷಣಾ ಘಟಕ, ಬೆಂಗಳೂರಿನಲ್ಲಿ ಉದ್ಯೋಗಾವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಜಿಲ್ಲಾ ಸರ್ವೇಕ್ಷಣಾ ಘಟಕ, ಬೆಂಗಳೂರು ನಗರ ಜಿಲ್ಲೆಯಲ್ಲಿ 2022-23ನೇ ಸಾಲಿಗೆ ಎನ್‌.ಹೆಚ್.ಎಂ
ಯೋಜನೆಯ ಎನ್‌.ಪಿ.ಡಿ.ಸಿ.ಎಸ್‌ ಖಾಲಿ ಇರುವ ಹುದ್ದೆ ಮತ್ತು ಎನ್‌.ಪಿ.ಪಿ.ಸಿ ಕಾರ್ಯಕ್ರಮದಡಿ 13 ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ.

ತಜ್ಞ ವೈದ್ಯರು, ಶುಶ್ರೂಷಕರು ಮತ್ತು ಆಪ್ತ ಸಮಾಲೋಚಕರು ಹುದ್ದೆಗಳಿಗೆ ಎಂಬಿಬಿಎಸ್‌, ಜಿ.ಎನ್‌.ಎಂ, ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಮತ್ತು ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.

ಈ ಹುದ್ದೆಗಳಿಗೆ ಆಯ್ಕೆಯಾ ಅಭ್ಯರ್ಥಿಗಳಿಗೆ ತಿಂಗಳಿಗೆ 4,000/-ರಿಂದ 1,10,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಜನವರಿ 30,2023ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಸಂದರ್ಶನ ನಡೆಯುವ ಸ್ಥಳ :
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣ,
ಹಳೇ ಟಿ.ಬಿ. ಆಸ್ಪತ್ರೆ, ಹಳೇ ಮದ್ರಾಸ್‌ ರಸ್ತೆ,
ಸ್ವಾಮಿ ವಿವೇಕಾನದಂದ ಮೆಟ್ರೋ ನಿಲ್ದಾಣ.
ಇಂದಿರಾನಗರ, ಬೆಂಗಳೂರು-38.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!