‘ಬಡೆ ಮಿಯಾ ಚೋಟೆ ಮಿಯಾ’ ಟ್ರೇಲರ್ ರಿಲೀಸ್: ಅಕ್ಷಯ್,​ ಟೈಗರ್ ಆಕ್ಟಿಂಗ್ ಗೆ ಅಭಿಮಾನಿಗಳು ಥ್ರಿಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಾಲಿವುಡ್ ನಲ್ಲಿ ತೆರೆಗೆ ಬರಲು ಬಹುನಿರೀಕ್ಷಿತ ಸಿನಿಮಾ ‘ಬಡೆ ಮಿಯಾ ಚೋಟೆ ಮಿಯಾ’ (Bade Miyan Chote Miyan) ಸಿದ್ದವಾಗಿದ್ದು, ಇಂದು ಟ್ರೇಲರ್​ (Bade Miyan Chote Miyan Trailer) ರಿಲೀಸ್​ ಆಗಿದೆ.

ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ (Akshay Kumar), ಟೈಗರ್​ ಶ್ರಾಫ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಟ್ರೇಲರ್​ ನಲ್ಲಿ ದೃಶ್ಯಗಳನ್ನು ಕಂಡು ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಮೈನವಿರೇಳಿಸುವಂತಹ ಆ್ಯಕ್ಷನ್​ ದೃಶ್ಯಗಳು ಈ ಟ್ರೇಲರ್​ನಲ್ಲಿ ಹೈಲೈಟ್​ ಆಗಿವೆ.

‘ಜಗತ್ತು ಇದಕ್ಕಿಂತ ದೊಡ್ಡ ಯುದ್ಧವನ್ನು ಕಂಡಿಲ್ಲ’ ಎಂದು ವಿಲನ್​ ಹೇಳುವ ಡೈಲಾಗ್​ ಕೇಳಿ ಸಿನಿಪ್ರಿಯರ ನಿರೀಕ್ಷೆ ಜಾಸ್ತಿ ಆಗಿದೆ. ಭಯಂಕರವಾದ ಯುದ್ಧವನ್ನು ಸಾರಿರುವ ಖಳನನ್ನು ಮಣಿಸಲು ಬರುವ ಸೈನಿಕರಾಗಿ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಈದ್​ ಪ್ರಯುಕ್ತ ಏಪ್ರಿಲ್​ 10ರಂದು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಬಿಡುಗಡೆ ಆಗಲಿದೆ.

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಅಲಿ ಅಬ್ಬಾಸ್​ ಜಫರ್​ ಅವರು ನಿರ್ದೇಶನ ಮಾಡಿದ್ದಾರೆ. ‘ಸುಲ್ತಾನ್​’, ‘ಟೈಗರ್​ ಜಿಂದಾ ಹೈ’ ರೀತಿಯ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಅವರು ಈಗ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಆ ಕಾರಣದಿಂದಲೂ ‘ಬಡೆ ಮಿಯಾ ಚೋಟೆ ಮಿಯಾ’ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿದೆ. ಈ ಸಿನಿಮಾದಲ್ಲಿ ಮಾನುಚಿ ಚಿಲ್ಲರ್​, ಪೃಥ್ವಿರಾಜ್​ ಸುಕುಮಾರನ್​, ಸೋನಾಕ್ಷಿ ಸಿನ್ಹಾ ಮುಂತಾದವರು ಕೂಡ ನಟಿಸಿದ್ದಾರೆ. ‘ಪೂಜಾ ಎಂಟರ್​ಟೇನ್ಮೆಂಟ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!