ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಆರಂಭಿಕ ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಗಣನೀಯ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ಕಾಂಗ್ರೆಸ್‌ನ ಉಮೇಶ್ ಮೇಟಿ ಅವರು ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರಿಗಿಂತ 3,207 ಮತಗಳ ಮುನ್ನಡೆಯಲ್ಲಿದ್ದಾರೆ.
ಮತಗಳ ವಿವರ:
ಉಮೇಶ್ ಮೇಟಿ (ಕಾಂಗ್ರೆಸ್): 6,106 ಮತಗಳು
ವೀರಣ್ಣ ಚರಂತಿಮಠ (ಬಿಜೆಪಿ): 2,899 ಮತಗಳು
ಬಾಗಲಕೋಟೆಯ ಈ ಉಪಚುನಾವಣೆಯು ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ. ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಅವರ ಪುತ್ರ ಉಮೇಶ್ ಮೇಟಿ ಕಣಕ್ಕಿಳಿದಿದ್ದು, ಆರಂಭದಲ್ಲೇ ಮತದಾರರ ಒಲವು ಕಾಂಗ್ರೆಸ್ ಪರವಾಗಿ ಕಂಡುಬರುತ್ತಿದೆ. ಐದು ಬಾರಿ ಶಾಸಕರಾಗಿ ಸ್ಪರ್ಧಿಸಿರುವ ಅನುಭವಿ ವೀರಣ್ಣ ಚರಂತಿಮಠ ಅವರಿಗೆ ಈ ಆರಂಭಿಕ ಹಿನ್ನಡೆ ಆಘಾತಕಾರಿಯಾಗಿದೆ.



