October 15, 2026
Thursday, October 15, 2026
spot_img

ಇನ್ಮುಂದೆ ಶಾಲೆ-ಕಾಲೇಜುಗಳಲ್ಲಿ ಕೆಟ್ಟ ಕೆಟ್ಟ ಹಾಡುಗಳಿಗೆ ಮಕ್ಕಳಿಂದ ಡ್ಯಾನ್ಸ್‌ ಮಾಡಿಸುವಂತಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾಲೆ-ಕಾಲೇಜುಗಳಲ್ಲಿ ಮಕ್ಕಳಿಗೆ ವರ್ಷಕ್ಕೊಂದು ಆನ್ಯುಯಲ್‌ ದಿನ ಇದ್ದೇ ಇರುತ್ತದೆ. ಇಲ್ಲಿ ಡ್ಯಾನ್ಸ್‌ ಮಾಡಿಸುವಾಗ ಹೆಚ್ಚಿನ ಶಿಕ್ಷಕರು ಹಾಡಿನ ಸಾಲುಗಳ ಅರ್ಥಕ್ಕಿಂತ ಹಾಡು ಎಷ್ಟು ಫೇಮಸ್‌ ಆಗಿದೆ ಹಾಗೂ ಬೀಟ್‌ ಹೇಗಿದೆ ಎಂದು ಗಮನ ಕೊಡುತ್ತಾರೆ. ಆದರೆ ಇನ್ಮುಂದೆ ಅಶ್ಲೀಲ ಸಾಹಿತ್ಯ ಇರುವ ಹಾಡುಗಳಿಗೆ ಯಾರೂ ನೃತ್ಯ ಮಾಡುವಂತಿಲ್ಲ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳು ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡುವಂತಿಲ್ಲ. ಈ ರೀತಿ ಹಾಡುಗಳು ಮಕ್ಕಳ ಮಾನಸಿಕ ಆರೋಗ್ಯಕ್ಕೆ ಪೆಟ್ಟು ನೀಡುತ್ತದೆ. ವಯಸ್ಸಿಗೆ ಮೀರಿದ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕಿಲ್ಲ. ಇಂಥ ಹಾಡುಗಳ ಮಕ್ಕಳ ದಿಕ್ಕು ತಪ್ಪಿಸುತ್ತವೆ ಹಾಗೂ ಶಿಕ್ಷಣ ಸಂಸ್ಥೆಗಳ ಗೌರವಕ್ಕೂ ಧಕ್ಕೆ ತರುತ್ತದೆ ಎಂದು ಬರೆದಿದೆ.

ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಈ ರೀತಿ ಹಾಡುಗಳನ್ನು ಹಾಕಿ ಮಕ್ಕಳನ್ನು ಕುಣಿಸುವಂತಿಲ್ಲ. ಅರ್ಥಪೂರ್ಣವಾದ ಹಾಡುಗಳಿಗೆ ಮಾತ್ರ ನೃತ್ಯ ಮಾಡಬೇಕಿದೆ. ಇಷ್ಟಾದಮೇಲೆಯೂ ಈ ರೀತಿ ವಿಷಯ ಕಂಡುಬಂದರೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ದೇಶಪ್ರೇಮ ಸಾರುವ, ಜನಪದ ಗೀತೆಗಳು, ಮಕ್ಕಳನ್ನು ಸರಿ ದಾರಿಯತ್ತ ಕರೆಯುವಂತಹ ಹಾಡುಗಳಿಗೆ ನೃತ್ಯ ಮಾಡಿಸಬಹುದು.

Must Read