‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಯಾನ್ ಮಾಡಿ: ಸಿಎಂ ಪಿಣರಾಯಿಗೆ ಬಂತು ಹೀಗೊಂದು ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಮಲಯಾಳಂನಲ್ಲಿ ಮೂಡಿಬಂದ ‘ದಿ ಕೇರಳ ಸ್ಟೋರಿ’ ಹೆಸರಿನಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿದ್ದರೆ, ಅತ್ತ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೇರಳದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆ ಆಧಾರಿತ ಸಿನಿಮಾವಾಗಿದ್ದು, ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ . ಪರ ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ನಟಿ ಅದಾ ಶರ್ಮಾ ಬುರ್ಕ ಧರಿಸಿ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಭಯೋತ್ಪಾದನೆ, ಮತಾಂತರ ಅಂಶಗಳಿವೆ ಎಂದು ವಿರೋಧಗಳು ಬರುತ್ತಿದ್ದು, ಚಿತ್ರಗಳು ಬಿಡುಗಡೆಯಾದರೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಎಂತಹ ಕೆಟ್ಟ ಹೆಸರು ಬರಬಹುದು ಯೋಚಿಸಿ ಎಂದು ಹಲವು ರಾಜಕೀಯ ಮುಖಂಡರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಿನಿಮಾವನ್ನು ಬ್ಯಾನ್ ಮಾಡುವ ಕುರಿತಾಗಿ ಮಾತನಾಡಿರುವ ಸಿನಿಮಾದ ನಿರ್ಮಾಪಕ ವಿಫುಲ್ ಶಾ, ‘ನಾವು ಸಿನಿಮಾದಲ್ಲಿ ಯಾವುದನ್ನೂ ಸುಳ್ಳು ಹೇಳಿಲ್ಲ. ಎಲ್ಲದಕ್ಕೂ ನಮ್ಮ ಹತ್ತಿರ ಸಾಕ್ಷಿ ಇವೆ. ಯಾರೇ ಪ್ರಶ್ನೆ ಮಾಡಿದರೂ ನಾವು ಉತ್ತರಿಸುತ್ತೇವೆ. ನಿಮಗೆ ಬೇಕಾಗಿರುವ ಸಾಕ್ಷಿ ಏನು ಅಂತ ವಿವರಿಸಿ’ ಎಂದಿದ್ದಾರೆ. ಇದು ಸತ್ಯದ ದರ್ಶನವಾಗಿದ್ದರಿಂದ ಸರಕಾರ ಬ್ಯಾನ್ ಮಾಡುವಂತಹ ಯೋಚನೆ ಮಾಡಲಾರದು ಎಂದು ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!