ಅರಣ್ಯದಲ್ಲಿ ಗುಂಡಿ ತೋಡಿ ಮಾರಿ ಪೂಜೆ: ಹಲವರ ಬಂಧನ, ನಿಧಿ ಶೋಧ ಶಂಕೆ

ಹೊಸದಿಗಂತ ವರದಿ, ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ಅರಣ್ಯ ಪ್ರದೇಶದಲ್ಲಿ ಒಂದು ಸಮುದಾಯಕ್ಕೆ ಸೇರಿದ ಕೆಲವರು ಮಾರಿಪೂಜೆಯ ಹೆಸರಿನಲ್ಲಿ ಬಾವಿ ತೋಡಿ ಅಲ್ಲೇ ಪಕ್ಕದಲ್ಲಿರುವ ಕಲ್ಲಿನ ಪೂಜೆ ನಡೆಸುವ ಕೃತ್ಯ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು ಈ ಕೃತ್ಯಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕೆಲವು ವ್ಯಕ್ತಿಗಳು ಸೇರಿದಂತೆ ಸ್ಥಳೀಯ ಗುಜರಿ ವ್ಯಾಪಾರಿಗಳು ಬಂಧಿತರಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಶಿರವಾಡದ ಅರಣ್ಯ ಪ್ರದೇಶದಲ್ಲಿ ಗೌಪ್ಯವಾಗಿ ಬಾವಿ ತೋಡುವ ಕೆಲಸ ನಡೆಸಲಾಗಿದ್ದು ಸುಮಾರು 15 ಅಡಿ ಬಾವಿ ತೋಡಲಾಗಿದೆ, ಪಕ್ಕದಲ್ಲಿರುವ ಕಲ್ಲಿಗೆ ಅರಶಿನ, ಕುಂಕುಮ ಬಳಿದು ಲಿಂಬು ಮಾಲೆಯನ್ನು ಹಾಕಿ ಭಯಾನಕ ವಾತಾವರಣವನ್ನು ಸೃಷ್ಟಿಸಲಾಗಿದೆ.
ಶಿರವಾಡದ ನಿವಾಸಿ ಗುಜರಿ ವ್ಯಾಪಾರಿ ಹಿದಾಯತ್ ಅಬ್ದುಲ್ ಘನಿ ರಾಣಿಬೆನ್ನೂರು ಎಂಬಾತ ಉತ್ತರ ಪ್ರದೇಶ ಮೂಲದ ರುಸ್ತುಂ ರಜಾಕ ಸಾಬ್, ಹರ್ಷದ್ ಅಲಿ ಹೈದರ್ ಅಲಿ ಅನ್ಸಾರಿ, ಸರ್ಫರಾಜ ಹಬೀಬುಲ್ಲಾ ಮೊದಲಾದವರ ಸಹಕಾರದೊಂದಿಗೆ ಅರಣ್ಯ ಪ್ರದೇಶದಲ್ಲಿ ಬಾವಿ ನಿರ್ಮಾಣಕ್ಕೆ ಕೈ ಹಾಕಿದ್ದು ಇದರ ಹಿಂದೆ ಅಡಗಿರುವ ಮರ್ಮವೇನು ಎಂಬುದು ಇದೀಗ ಚರ್ಚೆಯ ವಿಷಯವಾಗಿದೆ.
ಕನಸಲ್ಲಿ ಬಂದ ಮಾರಿಯಮ್ಮ
ಬಾವಿ ಕಡಿದ ಪ್ರಮುಖ ಆರೋಪಿ ಹಿದಾಯತ್ ಅಬ್ದುಲ್ ಘನಿ ಈ ಸಂಬಂಧಿಸಿದಂತೆ ಕಥೆಯೊಂದನ್ನು ಹೇಳತೊಡಗಿದ್ದು ಮಾರಿಯಮ್ಮ ಕನಸಿನಲ್ಲಿ ಬಂದು ಆ ಸ್ಥಳದಲ್ಲಿ ಬಾವಿ ತೋಡಿ ಆ ಬಾವಿಯ ನೀರಿನಿಂದ ಅಭಿಷೇಕ ಮಾಡುವಂತೆ ಸೂಚನೆ ನೀಡಿದ್ದರಿಂದ ಬಾವಿ ತೋಡುತ್ತಿರುವುದಾಗಿ ಹೇಳತೊಡಗಿದ್ದು ಇವರ ಮಾತು ಮಾತ್ರ ಯಾರೂ ನಂಬುವಂತೆ ಕಾಣುತ್ತಿಲ್ಲ.
ಯಾರಿಗೂ ಮಾಹಿತಿ ನೀಡದೇ ಅರಣ್ಯ ಪ್ರದೇಶದಲ್ಲಿ ಗುಪ್ತವಾಗಿ ಬಾವಿ ತೋಡುವ ಕೃತ್ಯ, ಪಕ್ಕದಲ್ಲಿ ಕಲ್ಲಿನ ಪೂಜೆ ನಡೆಸಿದಂತೆ ವಾತಾವರಣ ಸೃಷ್ಟಿಸಿರುವುದರ ಕುರಿತಂತೆ ಸಾಕಷ್ಟು ಅನುಮಾನಗಳು ಹುಟ್ಟಲು ಕಾರಣವಾಗಿದೆ.
ಗುಜರಿ ದಂಧೆ ನಡೆಸುತ್ತ ಶಿರವಾಡದಲ್ಲಿ ಅಂಗಡಿ ಸಹ ನಡೆಸುತ್ತಿರುವ ವ್ಯಕ್ತಿಯ ನಡೆಯಿಂದಾಗಿ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ.
ನಿಧಿ ಶೋಧ ನಡೆದಿಯೇ?
ಅರಣ್ಯ ಪ್ರದೇಶದಲ್ಲಿ ಬಾವಿ ತೋಡಿರುವ ಆರೋಪಿಗಳು ನಿಧಿಯ ಆಶೆಯಿಂದ ಭೂಮಿ ಅಗೆಯುವ ಕೃತ್ಯದಲ್ಲಿ ತೊಡಗಿಕೊಂಡಿರುವ ಸಾಧ್ಯತೆ ಇದ್ದು ದೇವರ ಹೆಸರಲ್ಲಿ ಜನರ ಮತ್ತು ಅಧಿಕಾರಿಗಳ ದಿಕ್ಕು ತಪ್ಪಿಸಲು ಹೊರಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇತ್ತೀಚೆನ ಕೆಲವು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ನಿಗೂಢ ಕೃತ್ಯಗಳನ್ನು ನಡೆಸಲಾಗುತ್ತಿದ್ದು ಇದರಲ್ಲಿ ಇನ್ನೂ ಕೆಲವು ಜನರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ನಿಧಿ ಶೋಧನೆಗಾಗಿ ಬಾವಿ ತೋಡುವ ಕೃತ್ಯ ನಡೆಸುತ್ತಿರುವ ಸಾಧ್ಯತೆ ಇರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಆರೋಪಿಗಳ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ ಅಡಿಯಲ್ಲಿ ಅಕ್ರಮ ಅರಣ್ಯ ಪ್ರವೇಶ, ಅರಣ್ಯ ಭೂಮಿಯ ದುರಪಯೋಗದ ಕುರಿತು ಪ್ರಕರಣ ದಾಖಲಿಸಲಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಅಮವಾಸೆಯ ದಿನದಿಂದ ಬಾವಿ ತೋಡುವ ಕಾರ್ಯ ಆರಂಭಿಸಿರುವುದಾಗಿ ಆರೋಪಿಗಳು ಹೇಳುತ್ತಿದ್ದರು ಸುಮಾರು ಹಿಂದಿನಿಂದಲೇ ತಮ್ಮ ಚಟುವಟಿಕೆಗಳನ್ನು ಆರಂಭಿಸಿರುವ ಸಾಧ್ಯತೆ ಇದೆ.
ಅರಣ್ಯ ಭೂಮಿಯಲ್ಲಿ ಸುಮಾರು 15 ಅಡಿ ಹೊಂಡ ತೋಡಲಾಗಿದ್ದರೂ ತಿಂಗಳುಗಟ್ಟಲೆ ಅರಣ್ಯ ಅಧಿಕಾರಿಗಳ ಗಮನಕ್ಕೆ ಬರದಿರುವುದು ವ್ಯವಸ್ಥೆಯ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತಿದೆ.
ಕಾರವಾರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ರಾಷ್ಟ್ರೀಯ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಯೋಜನಾ ಪ್ರದೇಶಗಳಿದ್ದು ಕರಾವಳಿಯಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಆಗುತ್ತಿರುವ ಮಾಹಿತಿ ಸಹ ಇದೆ ಬಂಧಿತ ಆರೋಪಿಗಳು ಹಲವು ದಿನಗಳಿಂದ ನಡೆಸುತ್ತ ಬಂದಿರುವ ಕೃತ್ಯದ ಕುರಿತು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯತೆ ಕಂಡು ಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!