RECIPE| ಆರೋಗ್ಯಕ್ಕೂ ಉತ್ತಮ ಈ ಬಾಳೆದಿಂಡಿನ ಚಟ್ನಿ, ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಟ್ನಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ? ಚಟ್ನಿ ಬಳಸದೆ ಇರುವವರು ಬಹುಷಃ ಯಾರೂ ಇರಲಿಕ್ಕಿಲ್ಲ. ಆದರೆ ಗಟ್ಟಿಯಾಗಿ ರುಬ್ಬಿದ್ದೆಲ್ಲ ಚಟ್ನಿಯಲ್ಲ, ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯಕ್ಕೆ ಪೂರಕವಾದ ಕೆಲವು ಚಟ್ನಿಗಳನ್ನು ವಿಶೇಷವಾಗಿ ತಯಾರಿಸಿಕೊಂಡು ಸವಿದು ನೋಡಿ. ಇವು ಊಟಕ್ಕೆ ರುಚಿ, ಉದರಕ್ಕೂ ಅಷ್ಟೇ ಉತ್ತಮ.

ಸಾಮಗ್ರಿ:

ಹೆಚ್ಚಿದ ಬಾಳೆದಿಂಡು ಒಂದೂವರೆ ಲೋಟ, ಒಂದು ಹೋಳು ತೆಂಗಿನಕಾಯಿ, ಚೂರು ಶುಂಠಿ, ಒಂದು ಸಣ್ಣ ಈರುಳ್ಳಿ, 3-4 ಹುರಿದ ಮೆಣಸು, 1 ಹಸಿ ಮೆಣಸಿನಕಾಯಿ, ಉಪ್ಪು.

ವಿಧಾನ : ಬಾಳೆದಿಂಡು, ಮೆಣಸು, ತೆಂಗಿನಕಾಯಿ ಹಾಕಿ ಚಟ್ನಿ ರುಬ್ಬಬೇಕು. ಬಳಿಕ ಶುಂಠಿ, ಈರುಳ್ಳಿ, ಹಸಿಮೆಣಸು ಸಣ್ಣಗೆ ಹೆಚ್ಚಿ ಬೆರೆಸಬೇಕು.

ಬಾಳೆ ಪೂಂಬೆ ಚಟ್ನಿ

ಸಾಮಗ್ರಿ: ಪೂಂಬೆಯ ಹೊರಗಿನ 2-3 ಹಾಳೆ, 1 ಗಡ್ಡೆ ಬೆಳ್ಳುಳ್ಳಿ, ಅರ್ಧ ಹೋಳು ತೆಂಗಿನಕಾಯಿ, 5-6 ಹುರಿದ ಮೆಣಸು, ಉಪ್ಪು, ಸ್ವಲ್ಪ ಹುಳಿ.

ವಿಧಾನ:

ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚಟ್ನಿ ರುಬ್ಬಬೇಕು.

ಬಾಳೆ ಪೂಂಬೆಯಲ್ಲಿ ಕಬ್ಬಿಣಾಂಶ ಅಧಿಕ. ರಕ್ತಹೀನತೆ ಇದ್ದವರಿಗೆ ಈ ಚಟ್ನಿ ತುಂಬಾ ಉಪಯುಕ್ತ. ರಕ್ತದೊತ್ತಡ, ಸಿಹಿಮೂತ್ರ ಸಮಸ್ಯೆಗೂ ರಾಮಬಾಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!