‘ಬ್ಯಾ೦ಡ್ ಬಾಜಾ ಬರಾತ್’ ನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದ್ರು ಬರೋಬ್ಬರಿ 50 ಬ್ಯಾಚುಲರ್‌ ವರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಹಾರಾಷ್ಟ್ರದಲ್ಲಿ ವಧು ಹುಡುಕಿಕೊಡಿ ಎಂದು 50ಕ್ಕೂ ಹೆಚ್ಚು ಅರ್ಹ ಬ್ಯಾಚುಲರ್ ಗಳು, ಮದು ಮಗನ ಗೆಟಾಪ್ ನಲ್ಲಿ ಕುದುರೆ ಸವಾರಿ, ‘ಬ್ಯಾ೦ಡ್ ಬಾಜಾ ಬರಾತ್ ನೊಂದಿಗೆ ಪುಣೆಯಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಸಾಗಿದ್ದಾರೆ.

ಈ ವೇಳೆ ಜಿಲ್ಲಾಧಿಕಾರಿಗಳಿಗೆ ವಿಶೇಷ ಮನವಿಮಾಡಿಕೊಂಡಿದ್ದು, ಪುರುಷ-ಮಹಿಳಾ ಅನುಪಾತ ಸರಿಪಡಿಸಲು ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳು (ಪಿಸಿಪಿಎನ್ ಡಿಟಿ) ಕಾಯ್ದೆಯನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರುವಂತೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ( 2019-21) ಪ್ರಕಾರ, ಮಹಾರಾಷ್ಟ್ರದಲ್ಲಿ ಪ್ರತಿ 1,000 ಪುರುಷರಿಗೆ 920 ಮಹಿಳೆಯರಿದ್ದಾರೆ.
ಆದ್ರೆ ಮದುವೆ ವಿಚಾರ ಪ್ರಸ್ತಾಪವಾದಗಲೆಲ್ಲಾ, ಹುಡುಗಿ ನಗರದಲ್ಲಿ ವಾಸಿಸುತ್ತಿದ್ದೀರಾ, ಉದ್ಯೋಗವಿದೆಯೇ ಇಲ್ಲವೇ ಎಂದು ಮೊದಲ ಪ್ರಶ್ನೆ ಕೇಳುತ್ತಿರುವುದಾಗಿ 29 ವರ್ಷದ ಶಿಲಾವಂತ್ ಕ್ಷೀರಸಾಗರ ಹೇಳಿದರು.

ಟೈಲರಿಂಗ್ ವೃತ್ತಿ ಮಾಡುತ್ತಿರುವ 27 ವರ್ಷದ ಔದುಂಬರ್ ಮಾಲಿ ಕೂಡ ಇಲ್ಲಿಯವರೆಗೂ 8 ಹುಡುಗಿಯನ್ನು ನೋಡಲಾಗಿದೆ. ಹುಡುಗಿ ಕುಟುಂಬದವರ ಒಂದೇ ಪ್ರಶ್ನೆ ಏನೆಂದರೆ ಸರಿಯಾದ ಉದ್ಯೋಗವಿದೆಯೇ ಅಥವಾ ಇಲ್ಲವೇ ಎಂಬುದಾಗಿದೆ. ಇದರಿಂದ ಅರ್ಹ ಬ್ಯಾಚುಲರ್ ಗಳಿಗೆ ವಧು ಸಿಗುತ್ತಿಲ್ಲ, ಪಿಸಿಪಿಎನ್ ಡಿಟಿ ಕಾಯ್ದೆ ಸರಿಯಾಗಿ ಅನುಷ್ಟಾನವಾದರೆ ವಧುವಿನ ಸಮಸ್ಯೆ ಸ್ವಲ್ಪ ಸುಧಾರಿಸಬಹುದೇನೂ ಎಂದು ಅವರು ಅಭಿಪ್ರಾಯಪಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!