Friday, June 2, 2023

Latest Posts

ಬೆಂಗಳೂರು ಯುವಕನಿಗೆ ಸಿಕ್ತು ಬರೋಬ್ಬರಿ 90 ಲಕ್ಷ ರೂ. ಉದ್ಯೋಗದ ಆಫರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ 90 ಲಕ್ಷ ರೂ. ವಾರ್ಷಿಕ ಸಂಬಳದ ಉದ್ಯೋಗದ ಆಫರ್ ಪಡೆದುಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತದ ಕಾರಣಕ್ಕೆ ಹಲವು ದೊಡ್ಡದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುತ್ತಿರುವ ನಡುವೆಯೂ ಈ ಬಾರಿ ಕ್ಯಾಂಪಸ್ ಆಯ್ಕೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡುತ್ತಿದ್ದಾರೆ. ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್‌ ಕಾಲೇಜಿನ ರಕ್ಷಿತ್ ದತ್ತಾತ್ರೇಯ ಹೆಗಡೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ಲೇಸ್‌ಮೆಂಟ್ ಪ್ಯಾಕೇಜ್ ಪಡೆದ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ಆರ್‌ವಿ ಸಿಇನಲ್ಲಿ ಇನ್ನರ್ಮೇಷನ್ ಟೆಕ್ನಾಲಜಿ ಯಲ್ಲಿ ಬ್ಯಾಚಲರ್ ಆಫ್ ಎಂಜಿನಿಯರಿಂಗ್ (ಬಿಇ) 5ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ರಕ್ಷಿತ್ ಹೆಗಡೆಗೆ ನ್ಯೂಯಾರ್ಕ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿ ‘UiPath’ 90 ಲಕ್ಷ ರೂ. ಪ್ಯಾಕೇಜ್‌ನ ಉದ್ಯೋಗದ ಆಫರ್ ನೀಡಿದೆ. ಕಂಪನಿಯು ರೊಬೋಟಿಕ್ ಪ್ರೊಸೆಸ್ ಆಟೋಮೇಷನ್ (RPA) ಸಾಫ್ಟ್‌ವೇರ್ ಉತ್ಪಾದಿಸುತ್ತದೆ. ರಕ್ಷಿತ್ ಅವರ ಲಿಂಕ್ಡ್ ಇನ್ ಪೊಫೈಲ್‌ನ ಪ್ರಕಾರ ಅವರು UiPathನಲ್ಲಿ ಅಪ್ ಕಮಿಂಗ್ ಸಾಫ್ಟ್ ವೇರ್ ಇಂಟರ್ನ್ ಆಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!