October 26, 2026
Monday, October 26, 2026
spot_img

ತಳಸಮುದಾಯಗಳ ಏಳಿಗೆಗೆ ಶ್ರಮಿಸಿದ ಜನನಾಯಕ ಬಂಗಾರಪ್ಪ: ಸಿಎಂ ಡಿಕೆಶಿ ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಜನ್ಮದಿನದಂದು ಸಿಎಂ ಡಿ.ಕೆ. ಶಿವಕುಮಾರ್‌ ಗೌರವ ನಮನಗಳನ್ನು ಸೂಚಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ಶಿವಮೊಗ್ಗದ ಸೊರಬದ ಮಣ್ಣಿನಿಂದ ನಾಯಕನಾಗಿ ಬೆಳೆದ ಬಂಗಾರಪ್ಪನವರು ತಳಸಮುದಾಯಗಳ ನೋವಿಗೆ ಸದಾ ಮಿಡಿದವರು. ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಗ್ರಾಮೀಣ ಜನರಿಗೆ ಮನೆ ಬೆಳಕಾಗಿಸಿದ ‘ಆಶ್ರಯ’ ವಸತಿ ಯೋಜನೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ‘ಅಕ್ಷಯ’ ಯೋಜನೆ ಹಾಗೂ ಹಳ್ಳಿಗಳ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಿದ ‘ಭಾಗ್ಯಜ್ಯೋತಿ’ಯಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದು ಲಕ್ಷಾಂತರ ಬಡವರ ಬದುಕಿಗೆ ಬೆಳಕಾದವರು ಎಂದು ಹೇಳಿದ್ದಾರೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಹಕ್ಕು ಮತ್ತು ನ್ಯಾಯ ಸಿಗಬೇಕೆಂಬುದು ಅವರ ಅಚಲ ಸಿದ್ಧಾಂತವಾಗಿತ್ತು. ಬಂಗಾರಪ್ಪನವರ ಜನಪರ ಕಾಳಜಿ, ರೈತಪರ ನಿಲುವು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವರು ಹಾಕಿಕೊಟ್ಟ ಸುಭದ್ರ ಹೆಜ್ಜೆಗುರುತುಗಳು ಇಂದಿಗೂ ಸಾರ್ವಜನಿಕ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಪ್ರೇರಣೆ ಎಂದಿದ್ದಾರೆ.

Must Read