Saturday, April 1, 2023

Latest Posts

IND vs BAN: ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವಿರುದ್ಧ ಮೊದಲೆರಡು ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಈಗಾಗಲೇ ಗೆಲುವು ಸಾಧಿಸಿದೆ.
ಇದೀಗ ಅಂತಿಮ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ಎರಡು ಪಂದ್ಯ ಗೆದ್ದಿರುವ ಬಾಂಗ್ಲಾ, ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಲು ಸಜ್ಜಾಗಿದೆ. ಇತ್ತ ಎರಡು ಪಂದ್ಯವನ್ನು ಸೋತಿರುವ ಭಾರತ ಈ ಒಂದು ಪಂದ್ಯವನ್ನಾದರೂ ಗೆದ್ದು ಪ್ರತಿಷ್ಠೆ ಕಾಪಾಡಿಕೊಳ್ಳಬೇಕಿದೆ.

ಚಿತ್ತಗಾಂಗ್‌ನಲ್ಲಿ ನಡೆಯುತ್ತಿರುವ ಈ ಪಂದ್ಯ ಬಾಂಗ್ಲಾಗೆ ಔಪಚಾರಿಕವಾಗಿದೆ. ಸರಣಿ ಸೋಲು ಅನುಭವಿಸಿರುವ ಭಾರತ ಈ ಪಂದ್ಯವನ್ನಾದರೂ ಗೆದ್ದು, ಉತ್ತಮ ಪ್ರದರ್ಶನ ನೀಡಬೇಕಿದೆ. ಎರಡನೇ ಪಂದ್ಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ತಂಡದಿಂದ ಹೊರ ಉಳಿದಿದ್ದಾರೆ. ಇದೀಗ ರೋಹಿತ್ ಜಾಗಕ್ಕೆ ಕೆ.ಎಲ್ ರಾಹುಲ್ ಎಂಟ್ರಿ ನೀಡಿದ್ದು, ಕ್ಯಾಪ್ಟನ್ಸಿ ಜವಾಬ್ದಾರಿ ನಿಭಾಯಿಸಬೇಕಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!