Photo Gallery| ಮಾಂಡೌಸ್‌ ಚಂಡಮಾರುತದ ಭೀಕರ ಎಫೆಕ್ಟ್‌ ಹೇಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಂಡೌಸ್‌ ಚಂಡಮಾರುತದ ಎಫೆಕ್ಟ್‌ನಿಂದಾಗಿ ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿಯಲ್ಲಿ ಭಾರೀ ಮೆಳೆಯಾಗಿದೆ. ಸೈಕ್ಲೋನ್‌ನಿಂದ ಈಗಾಗಲೇ ಹಲವೆಡೆ ಭೂಕುಸಿತ, ಧರೆಗುರುಳಿದ ಮರಗಳು, ವಿದ್ಯುತ್‌ ಕಂಬ ಮನೆಗಳು ಹಾನಿಯಾಗಿವೆ. ಯಾವ್ಯಾವ ಪ್ರದೇಶದಲ್ಲಿ ಏನೆಲ್ಲಾ ಅನಾಹುತವಾಗಿದೆ ಎಂಬುದನ್ನು ನೀವೇ ನೋಡಿ.

ಚಂಡಮಾರುತ ‘ಮಂಡೌಸ್’ ಎಫೆಕ್ಟ್ 3 ಗಂಟೆಗಳಲ್ಲಿ ಸುಮಾರು 65 ಮರಗಳು ನೆಲಕ್ಕುರುಳಿವೆ

Image

Image

Image

‘ಮಂಡೌಸ್’ ಚಂಡಮಾರುತವು ಅರುಂಬಕ್ಕಂನ ಎಂಎಂಡಿಎ ಕಾಲೋನಿಯ ಮೇಲೆ ಪರಿಣಾಮ ಬೀರಿದೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ಭಾರೀ ಗಾಳಿಗೆ ಚೆನ್ನೈನ ಎಗ್ಮೋರ್ ಪ್ರದೇಶದಲ್ಲಿ ದೊಡ್ಡ ಮರವೊಂದು ನೆಲಕ್ಕುರುಳಿದೆ.

ಚೆನ್ನೈನ ಟಿ ನಗರ ಪ್ರದೇಶದಲ್ಲಿ ಗೋಡೆ ಕುಸಿದು ಅದರ ಸಮೀಪ ನಿಲ್ಲಿಸಿದ್ದ ಮೂರು ಕಾರುಗಳಿಗೆ ಗಂಭೀರ ಹಾನಿಯಾಗಿದೆ. ಘಟನೆಯ ವೇಳೆ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ.

ಚೆನ್ನೈನ ಮರೀನಾ ಬೀಚ್‌ನಲ್ಲಿ ಅಂಗವಿಕಲರಿಗಾಗಿ ಸ್ಥಾಪಿಸಲಾದ ‘ಶಾಶ್ವತ ರ‍್ಯಾಂಪ್’ನ ಭಾಗವು ಬಲವಾದ ಗಾಳಿಯಿಂದಾಗಿ ಹಾನಿಗೊಳಗಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!