25 ವರ್ಷದ ಹಳೇ ತಪ್ಪಿಗೆ ರಾಹುಲ್ ಬಳಿ ಕ್ಷಮೆ ಕೇಳಿದ ಬಾಂಗ್ಲಾ ಕೋಚ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

25  ವರ್ಷದ ಹಿಂದೆ ನಡೆದ ಘಟನೆಯೊಂದಕ್ಕೆ ರಾಹುಲ್ ದ್ರಾವಿಡ್ ಬಳಿ ಬಾಂಗ್ಲಾ ಕೋಚ್ ಅಲನ್ ಡೊನಾಲ್ಡ್ ಕ್ಷಮೆಯಾಚಿಸಿದ್ದಾರೆ.

25 ವರ್ಷಗಳ ಹಿಂದೆ ಅಲನ್ ವೇಗಿ ಬೌಲರ್ ಆಗಿದ್ದವರು. ಇವರ ಬೌಲಿಂಗ್‌ನಲ್ಲಿ ಯಾವ ಬ್ಯಾಟರ್‌ಗೂ ಉತ್ತಮ ಪ್ರದರ್ಶನ ನೀಡೋದು ಕಷ್ಟವಾಗಿತ್ತು. ಆದರೆ ಇವರ ಸಿಟ್ಟಿನ ಬಗ್ಗೆಯೂ ಅಷ್ಟೇ ಸುದ್ದಿಯಾಗಿತ್ತು. ಬೇರೆ ಆಟಗಾರರ ಜತೆ ಮಾತಿನ ಚಕಮಕಿ ಮಾಡುತ್ತಿದ್ದರು. 25  ವರ್ಷಗಳ ಹಿಂದೆ ಭಾರತದ ವಿರುದ್ಧದ ಪಂದ್ಯದಲ್ಲಿ ಇದೇ ರೀತಿ ಘಟನೆಯೊಂದು ನಡೆದಿತ್ತು.

ಯಾರ ಬಳಿಯೂ ಹೆಚ್ಚು ಮಾತೇ ಆಡದ ರಾಹುಲ್ ದ್ರಾವಿಡ್ ಜೊತೆ ಡೊನಾಲ್ಡ್ ವಾಗ್ವಾದ ಮಾಡಿದ್ದರು. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಜೊತೆಯಾಟವನ್ನು ಬ್ರೇಕ್ ಮಾಡೋಕೆ ಡೊನಾಲ್ಡ್‌ಗೆ ಸಾಧ್ಯವಾಗಿರಲಿಲ್ಲ. ಇವರಿಬ್ಬರ ಆಟವನ್ನು ಮಾನಸಿಕವಾಗಿ ಹಾಳುಮಾಡಲು ಡೊನಾಲ್ಡ್ ಅನುಪಚಿತ ವರ್ತನೆ ತೋರಿದ್ದರು.

ಇದಕ್ಕಾಗಿ ಇದೀಗ ಡೊನಾಲ್ಡ್ ಕ್ಷಮೆಯಾಚಿಸಿದ್ದಾರೆ. ರಾಹುಲ್ ದ್ರಾವಿಡ್ ಬಗ್ಗೆ ನನಗೆ ಅಪಾರ ಗೌರವವಿದೆ. ಅವರನ್ನು ಭೇಟಿಯಾಗಲು ಬಯಸುತ್ತೇನೆ. ಅಂದಿನ ನನ್ನ ವರ್ತನೆಗೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಅಂದು ರಾಹುಲ್ ವಿಕೆಟ್ ಪಡೆದಿದ್ದೆ. ಆದರೆ ನನ್ನ ವರ್ತನೆಯಿಂದ ಸೋತಿದ್ದೆ ಎಂದು ಹೇಳಿದ್ದು, ಈ ವಿಡಿಯೋ ನೋಡಿದ ದ್ರಾವಿಡ್ ನಕ್ಕಿದ್ದು, ಇದೆಲ್ಲಾ ಆಟದ ಭಾಗ ಅಷ್ಟೆ, ಕ್ಷಮೆ ಕೇಳುವುದು ಬೇಡ, ನಿಮ್ಮ ಜತೆ ಡಿನ್ನರ್ ಮಾಡುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!