ಹೊಸದಿಗಂತ ಡಿಜಿಟಲ್ ಡೆಸ್ಕ್
ನಾಯಕತ್ವದ ಒತ್ತಡ ಕಳಚಿಕೊಂಡಿರುವ ವಿರಾಟ್ ಕೊಹ್ಲಿ ಅಬ್ಬರವನ್ನು ಈ ಬಾರಿಯ ಐಪಿಎಲ್ ನಲ್ಲಿ ಕಾಣಬಹುದು. ಯಾವುದೇ ಒತ್ತಡವಿಲ್ಲದೆ ಕಣಕ್ಕಿಳಿಯುವ ಕೊಹ್ಲಿಯನ್ನು ಅತ್ಯಂತ ಅಪಾಯಕಾರಿ, ಅವರನ್ನು ಕಟ್ಟಿಹಾಕುವುದು ಬೌಲರ್ ಗಳಿಗೆ ಕಠಿಣ ಸವಾಲಾಗಲಿದೆ. ಕಳೆದ ಕೆಲ ಸೀಜನ್ ಗಳ ಹಿಂದೆ ಕಂಡಿದ್ದ ಕೊಹ್ಲಿಯ ಅಬ್ಬರವನ್ನ ಈ ಬಾರಿಯೂ ಕಾಣಲಿದ್ದೀರಿ ಎಂದು ಆರ್ಸಿಬಿ ಆಟಗಾರ ಮ್ಯಾಕ್ಸ್‌ವೆಲ್ ಎದುರಾಳಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಈ ಬಾರಿಯ ಐಪಿಎಲ್ ಗೆ ಆರ್ಸಿಬಿ ಭರ್ಜರಿ ಸಿದ್ಧತೆ ನಡೆಸಿದೆ. ವಿರಾಟ್ ತೊರೆದಿದ್ದ ತಂಡದ ನಾಯಕತ್ವ ಜವಾಬ್ದಾರಿಯನ್ನು ಫಾಫ್ ಡು ಫ್ಲೆಸಿಸ್ ವಹಿಸಿಕೊಂಡಿದ್ದಾರೆ. ಕೊಹ್ಲಿ ಈ ಬಾರಿ ತಂಡದಲ್ಲಿ ಕೇವಲ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಯಲಿದ್ದಾರೆ. ಇತ್ತೀನ ದಿನಗಳಲ್ಲಿ ಕೊಂಚ ಲಯ ಕಳೆದುಕೊಂಡಂತೆ ಕಾಣುತ್ತಿರುವ ಕೊಹ್ಲಿ ಐಪಿಎಲ್ ನಲ್ಲಿ ಫಾರ್ಮ್ ಮರಳಿ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಈ ಕುರಿತು ಆರ್ಸಿಬಿ ಪಾಡ್ ಕಾಸ್ಟ್ ನಲ್ಲಿ ಮಾತನಾಡಿರುವ ಮ್ಯಾಕ್ಸ್ ವೆಲ್, ವಿರಾಟ್ ಕೊಹ್ಲಿ ಈಗ ಸಂಪೂರ್ಣವಾಗಿ ಒತ್ತಡ ಮುಕ್ತರಾಗಿದ್ದಾರೆ. ಅವರು ಹೀಗೆ ಕಣಕ್ಕಿಳಿದಾಗ ಎದುರಾಳಿಗಳಿಗೆ ಅಪಾಯಕಾರಿಯಾಗಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಪರಿಪಕ್ವರಾಗುತ್ತಿದ್ದಾರೆ. ಪ್ರತಿ ನಿರ್ಧಾರವನ್ನು ಅಳೆದು ತೂಗಿ ತೆಗೆದುಕೊಳ್ಳುತ್ತಾರೆ. ವಿರಾಟ್ ಕೊಹ್ಲಿ ಜೊತೆಗಿನ ಗೆಳೆತನವನ್ನು ನಾನು ಆನಂದಿಸುತ್ತಿದ್ದೇನೆ ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ. ಮಾರ್ಚ್ 27 ರಂದು ಪಂಜಾಬ್ ಕಿಂಗ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ಆರ್ಸಿಬಿ ಐಪಿಎಲ್ ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ