ಏಷ್ಯಾಕಪ್‌ನಲ್ಲಿ ಬಾಂಗ್ಲಾ ಹೀನಾಯ ಪ್ರದರ್ಶನ: ಟಿ20ಗೆ ನಿವೃತ್ತಿ ಘೋಷಿಸಿದ ಖ್ಯಾತ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾದೇಶದ ವಿಕೆಟ್‌ಕೀಪರ್ ಮುಶ್ಫಿಕರ್ ರಹೀಮ್ ಭಾನುವಾರ ಟಿ 20 ಅಂತರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ರಹೀಮ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆಟದ ಇತರ ಎರಡು ಸ್ವರೂಪಗಳಾದ ಏಕದಿನ ಹಾಗೂ ಟೆಸ್ಟ್‌ ಮಾದರಿಗಳನ್ನು ಮತ್ತಷ್ಟು ಕಾಲ ರಾಷ್ಟ್ರವನ್ನು ಪ್ರತಿನಿಧಿಸಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಪ್ರಸ್ತು ತ ಯುಎಇನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ಹೀನಾಯ ಪ್ರದರ್ಶ ತೋರಿದೆ. ಒಂದೂ ಪಂದ್ಯ ಗೆಲ್ಲದೆ ಟೂರ್ನಿಯಿಂದ ಹೊರಬಿದ್ದಿದೆ. ತಂಡದ ಪ್ರದರ್ಶನದಿಂದ ಬೇಸರಗೊಂಡು ಮುಶ್ಫಿಕರ್ ನಿವೃತ್ತಿ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

“ನಾನು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ. ಟೆಸ್ಟ್ ಮತ್ತು ಏಕದಿನ ಸ್ವರೂಪಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತೇನೆ. ಅವಕಾಶ ಬಂದಾಗ ಫ್ರಾಂಚೈಸ್ ಲೀಗ್‌ಗಳನ್ನು ಆಡಲು ನಾನು ಲಭ್ಯವಿರುತ್ತೇನೆ. ಎರಡು ಮಾದರಿಗಳಲ್ಲಿ ನನ್ನ ರಾಷ್ಟ್ರವನ್ನು ಹೆಮ್ಮೆಯಿಂದ ಪ್ರತಿನಿಧಿಸಲು ಎದುರು ನೋಡುತ್ತಿದ್ದೇನೆ” ಎಂದು ರಹೀಂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!