ದುರ್ಗಾಪೂಜೆಗೆ ಶುಭಕೋರಿದ ಬಾಂಗ್ಲಾ ಹಿಂದೂ ಕ್ರಿಕೆಟಿಗನಿಗೆ ಇಸ್ಲಾಂಗೆ ಮತಾಂತರವಾಗುವಂತೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಂದೂಗಳ ಪವಿತ್ರ ಹಬ್ಬವಾದ ದುರ್ಗಾಪೂಜೆಗೆ ಶುಭ ಹಾರೈಸಿದ ಬಾಂಗ್ಲಾ ಕ್ರಿಕೆಟ್‌ ತಂಡದ ಸ್ಟಾರ್‌ ಓಪನರ್‌ ಲಿಟನ್‌ ದಾಸ್‌ ಗೆ ದೇಶದ ಮೂಲಭೂತವಾದಿಗಳು ಇಸ್ಲಾಂ ಗೆ ಮತಾಂತರವಾಗುವಂತೆ ಬೆದರಿಕೆ ಒಡ್ಡಿದ್ದಾರೆ.
ಲಿಟನ್‌ ದಾಸ್‌ ಪ್ರಸ್ತುತ ಬಾಂಗ್ಲಾ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಹಿಂದೂ ಆಟಗಾರ. ಕಳೆದ ಕೆಲ ವರ್ಷಗಳಿಂದ ಬಾಂಗ್ಲಾ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಲಿಟನ್‌‌ ಕುಮಾರ್‌ ದಾಸ್ ತನ್ನ ಆಟದ ಬಲದಿಂದಲೇ ಬಾಂಗ್ಲಾ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸಿದ್ದಾರೆ. ಲಿಟನ್‌ ದಾಸ್‌ ಕೆಲ ದಿನಗಳ ಹಿಂದೆ ದುರ್ಗಾ ಪೂಜೆಯ ಪ್ರಯುಕ್ತ ಸಾಮಾಜಿಕ ತಾಣದಲ್ಲಿ ದುರ್ಗಾ ದೇವಿಯ ಚಿತ್ರವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶುಭ ಕೋರಿದ್ದರು.

“ಸುಭೋ ಮಹಾಲಯ! ದುರ್ಗಾ ಮಾತೆ ಎಲ್ಲರಿಗೂ ಆಶೀರ್ವದಿಸುತ್ತಾಳೆ ಎಂದು ಕ್ರಿಕೆಟಿಗ ಬರೆದುಕೊಂಡಿದ್ದರು. ಇದೀಗ ಈ ಪೋಸ್ಟ್ ಗೆ ಬಾಂಗ್ಲಾ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮುಸ್ಲಿಂ ದೇಶ ಬಾಂಗ್ಲಾದಲ್ಲಿ ವಾಸಿಸುತ್ತ ಹಿಂದೂ ಹಬ್ಬಗಳನ್ನು ಆಚರಿಸುತ್ತಿರುವುದಕ್ಕೆ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಲಿಟನ್‌ ದಾಸ್‌ ಈ ಕೂಡಲೇ ಮತಾಂತರವಾಗಬೇಕು ಎಂದು ಆಗ್ರಹಿಸಿದ್ದಾರೆ. ಮತ್ತು ಹಿಂದೂ ದೇವರ ಕುರಿತಾಗಿ ಅಪಹಾಸ್ಯ ಮಾಡಿದ್ದಾರೆ. ಕೆಲ ಮೂಲಭೂತವಾದಿಗಳು “ಅಲ್ಲಾಹನು ಎಲ್ಲರಿಗೂ ಮಾರ್ಗದರ್ಶನ ನೀಡಲಿ ಮತ್ತು ಲಿಟನ್‌ ದಾಸ್‌ ಗೆ ಸರಿಯಾದ ಮಾರ್ಗವನ್ನು (ಇಸ್ಲಾಂ) ಹುಡುಕುವ ಬುದ್ಧಿವಂತಿಕೆಯನ್ನು ನೀಡಲಿ” ಎಂದು ಕಾಮೆಂಟ್ ಮಾಡಿದ್ದಾರೆ.
ಬಾಂಗ್ಲಾ ದೇಶದಲ್ಲಿ ಇಂತಹ ಸಂಗತಿಗಳು ಹೊಸತೇನಲ್ಲ. ಕೆಲ ದಿನಗಳ ಹಿಂದೆ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಮುಸ್ಲಿಂ ಜಾಲತಾಣಿಗರು ವಿಡಿಯೋವೊಂದನ್ನು ಮುಂದಿಟ್ಟುಕೊಂಡು ಇನ್ನೊಬ್ಬ ಹಿಂದೂ ಆಟಗಾರ ಸೌಮ್ಯ ಸರ್ಕಾರ್  ಅವರನ್ನು ನಿಂದಿಸಿದ್ದರು. ಆ ವೈರಲ್ ವಿಡಿಯೋದಲ್ಲಿ ಮಗುವೊಂದು ತನ್ನ ನೆಚ್ಚಿನ ಬಾಂಗ್ಲಾದೇಶದ ಕ್ರಿಕೆಟಿಗರ ಹೆಸರನ್ನು ಹೇಳುತ್ತಿದ್ದ‌ ದೃಶ್ಯಗಳಿದ್ದವು.
ಮಶ್ರಫೆ ಮೊರ್ತಜಾ, ತಸ್ಕಿನ್ ಅಹ್ಮದ್ ಮತ್ತು ಶರೀಫುಲ್ ಅವರ ನೆಚ್ಚಿನ ಕ್ರಿಕೆಟಿಗರು ಎಂದು ಮಗು ಬಣ್ಣಿಸುತ್ತದೆ. ಆದರೆ, ಸೌಮ್ಯ ಸರ್ಕಾರ್ ಬಗ್ಗೆ ಮಗುವನ್ನು ಕೇಳಿದಾಗ, ಅವನು ಹಿಂದೂ ಆಗಿರುವುದರಿಂದ ಅವನನ್ನು ನಾನು ಇಷ್ಟಪಡುವುದಿಲ್ಲ ಮತ್ತು ಭೇಟಿಯಾಗಲು ಬಯಸುವುದಿಲ್ಲ ಎಂದು ಮಗು ಹೇಳಿದ್ದನ್ನೇ ಮುಂದಿಟ್ಟುಕೊಂಡು ಸೌಮ್ಯಾರನ್ನು ಟ್ರೋಲ್‌ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!