Monday, March 27, 2023

Latest Posts

ಶಿವಮೊಗ್ಗ | ಯಶಸ್ವಿಗೊಂಡ ಶಿರಾಳಕೊಪ್ಪ ಬಂದ್ ಕರೆ

ಹೊಸದಿಗಂತ ವರದಿ,ಶಿವಮೊಗ್ಗ:

ಹಿಂದೂ ಜಾಗರಣ ವೇದಿಕೆ ನೀಡಿದ ಸ್ವಯಂ ಪ್ರೇರಿತ ಶಿರಾಳಕೊಪ್ಪ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಹೋಟೆಲ್ ಅಂಗಡಿ ವ್ಯಾಪಾರ ವಹಿವಾಟು ಸ್ಥಬ್ದಗೊಂಡಿದ್ದು ಕಂಡು ಬಂತು.

ವಾಲ್ಮೀಕಿ ಭವನ ಆವರಣದಲ್ಲಿ ಪಟ್ಟಣದ ಸ್ಥಳೀಯ ಕಾರ್ಯಕರ್ತರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜಮಾವಣೆಗೊಂಡು ದಾರಿಯೂದ್ದಕ್ಕೂ ಜೈ ಶ್ರೀರಾಮ್, ಶಿವಾಜಿ ಮಹರಾಜ್ ಘೋಷಣೆಗಳನ್ನು ಕೂಗುತ್ತ ಪೋಲೀಸ್ ಠಾಣೆ ಹತ್ತಿರ ಪ್ರತಿಭಟಿಸಿದರು.

ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಸತೀಶ ಪೂಜಾರ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಪಟ್ಟಣದಲ್ಲಿ ಕೆಲ ಮತಾಂಧ ಶಕ್ತಿಗಳ ದಬ್ಬಾಳಿಕೆ ಹೆಚ್ಚಾಗಿದ್ದು ಇತ್ತೀಚಿನ ದಿನಗಳಲ್ಲಿ ಅದು ವಿಪರೀತವಾಗಿದೆ. ಇದನ್ನು ಹತ್ತಿಕ್ಕಲು ಪೋಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ದಬ್ಬಾಳಿಕೆ ಮಾಡಿದವರನ್ನು ಬಿಟ್ಟು ಅಮಾಯಕ ಹಿಂದೂ ಯುವಕರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ ಪೋಲೀಸ್ ಅಧಿಕಾರಿಯನ್ನು ತಕ್ಷಣ ಅಮಾನುತುಗೊಳಿಸಬೇಕು. ಸಂತೆ ಮೈದಾನದಲ್ಲಿ ಕೆಲ ಪುಂಡರ ಹಾವಳಿಯಿಂದ ಹಳ್ಳಿಯಿಂದ ಬರುವ ರೈತರನ್ನು ಬೆದರಿಸಿ ಅವರು ತರುವ ತರಕಾರಿ ಇನ್ನಿತರ ವಸ್ತುಗಳನ್ನು ದಬ್ಬಾಳಿಕೆ ಮಾಡಿ ಖರೀದಿಸಿವವರ ವಿರುದ್ದ ಕ್ರಮಕೈಗೊಳ್ಳಬೇಕು ರೈತರು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಪಟ್ಟಣದಲ್ಲಿ ಈ ಹಿಂದೆ ಅಕ್ರಮ ಜಿಂಕೆ ಸಾಕಿದ್ದ ಕ್ರಿಮಿನಲ್ ಹಿನ್ನಲೆ ಇರುವ ವ್ಯಕ್ತಿಯ ಮೇಲೆ ಸುಮೊಟೋ ಕೇಸ್ ದಾಖಲಿಸಿ ಮರು ವಿಚಾರಣೆ ನಡೆಸಬೇಕು ಒಂದು ವೇಳೆ ಇಲಾಖೆಯವರು 20 ದಿನದೊಳಗಾಗಿ ಈ ಬೇಡಿಕೆ ಈಡೇರಿಸಿದಿದ್ದರೆ ಜಗದೀಶ ಕಾಂರಂತರ ನೇತೃತ್ವದಲ್ಲಿ ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!