ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ 84 ವರ್ಷದ ವ್ಯಕ್ತಿಯೊಬ್ಬರು 11 ಬಾರಿ ಕೋವಿಡ್ -19 ಲಸಿಕೆ ತೆಗೆದುಕೊಂಡಿದ್ದು, ಇದೀಗ ಇವರ ವಿರುದ್ಧ ದೂರು ದಾಖಲಾಗಿದೆ.
ಜಿಲ್ಲಾ ವೈದ್ಯಾಧಿಕಾರಿ ಡಾ.ವಿನಯ್ ಕೃಷ್ಣ ಪ್ರಸಾದ್ ಅವರು ನೀಡಿದ ದೂರಿನ ಆಧಾರದ ಮೇಲೆ, ಬಿಹಾರದ ಮಾಧೇಪುರ ಜಿಲ್ಲೆಯ ನಿವಾಸಿ ಬ್ರಹ್ಮದೇವ್ ಮಂಡಲ್ ವಿರುದ್ಧ ಪುರೈನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹನ್ನೊಂದು ಬಾರಿ ಕೋವಿಡ್ ಲಸಿಕೆ ಪಡೆದಿದ್ದ ಬ್ರಹ್ಮದೇವ್ ಮಂಡಲ್ ಹನ್ನೆರಡನೇ ಬಾರಿಗೆ ಕೋವಿಡ್ ಲಸಿಕೆ ಪಡೆಯಲು ಬಂದಾಗ ಆರೋಗ್ಯ ಕಾರ್ಯಕರ್ತರಿಗೆ ವಿಚಾರ ತಿಳಿದಿದ್ದು, ಪ್ರಾಥಮಿಕ ತನಿಖೆ ಮತ್ತು ತಪ್ಪೊಪ್ಪಿಗೆಯಲ್ಲಿ ಅವರು ತನ್ನ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಬಳಸಿ 11 ಬಾರಿ ಲಸಿಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
11 ಬಾರಿ ಲಸಿಕೆ ಹಾಕಿಸಿಕೊಂಡ ನಂತರ ತಾನು ಅನುಭವಿಸುತ್ತಿದ್ದ ಕೆಲವು ಗಂಭೀರ ಕಾಯಿಲೆಗಳಿಂದ ಮುಕ್ತಿ ಪಡೆದಿದ್ದೇನೆ ಎಂದು ಮಂಡಲ್ ಹೇಳಿಕೊಂಡಿದ್ದಾರೆ.