ಹೊಸದಿಗಂತ ಡಿಜಿಟಲ್ ಡೆಸ್ಕ್:
ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3-0 ಮುನ್ನಡೆಯೊಂದಿಗೆ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ಆಸೀಸ್, ಕೊನೆಯ ಎರಡು ಓವರ್ಗಳಲ್ಲಿ ಒಂದು ವಿಕೆಟ್ ಪಡೆಯಲಾಗದೆ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು. 388 ರನ್ಗಳ ಗೆಲುವಿನ ಗುರಿ ಪಡೆದಿದ್ದ ರೂಟ್ ಪಡೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿತ್ತು. ಆದರೆ, ಇಂದು ಬೆಳಗ್ಗೆ ದಿಢೀರ್ ಕುಸಿತ ಕಂಡು 100 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು.
ಈ ಸಂದರ್ಭ ತಂಡಕ್ಕೆ ನಾಯಕ ಜೋ ರೂಟ್ (24) ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್(60) ಜೊತೆಗೂಡಿ ಆಟವಾಡಿದರು. ಅರ್ಧಶತಕದ ಆಡವಾಡಿದ ಸ್ಟೋಕ್ಸ್(60) ನಾಯಕನ ವಿಕೆಟ್ ಪತನದ ಬಳಿಕ ಜಾನಿ ಬೈರ್ಸ್ಟೋ (41) ಇಂಗ್ಲೆಂಡ್ಗೆ ನೆರವಾದರು.
ಆದರೆ, ಇವರಿಬ್ಬರು ಔಟ್ ಆದ ಬಳಿಕ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ 11, ವುಡ್ 0 ಹಾಗೂ ಜಾಕ್ ಲೀಚ್ 26 ರನ್ಗೆ ಪೆವಿಲಿಯನ್‌ಗೆ ಮರಳಿದ್ದು ಇಂಗ್ಲೆಂಡ್ ಪಾಳೆಯದಲ್ಲಿ ಸೋಲಿನ ಆತಂಕ ಮೂಡಿಸಿತ್ತು. ಆದರೆ, ಅಂತಿಮವಾಗಿ ಸ್ಟುವರ್ಟ್ ಬ್ರಾಡ್ 35 ಎಸೆತಗಳಲ್ಲಿ 8 ಹಾಗೂ ಜೇಮ್ಸ್ ಎಂಡರ್ಸನ್ 6 ಬಾಲ್ ಎಂದುರಿಸಿ ಔಟಾಗದೆ ಉಳಿದುಕೊಂಡು ಸೋಲಿನಿಂದ ಬಚಾವ್ ಮಾಡಿದೆ. ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ(137, 101) ಬಾರಿಸಿ ಮಿಂಚಿದ ಉಸ್ಮಾನ್ ಖವಾಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸರಣಿಯ ಅಂತಿಮ ಪಂದ್ಯವು ಜ.14ರಿಂದ ಹೋಬಾರ್ಡ್ನಲ್ಲಿ ನಡೆಯಲಿದೆ.